×
Ad

2016ರ ಚುನಾವಣೆಗಳಿಗಾಗಿ ಕೇವಲ 355 ಕೋ.ರೂ ಸಂಗ್ರಹಿಸಿದ್ದ ಪಕ್ಷಗಳು ವ್ಯಯಿಸಿದ್ದು 573 ಕೋ.ರೂ!

Update: 2017-07-06 20:31 IST

ಹೊಸದಿಲ್ಲಿ,ಜು.6: ಕಳೆದ ವರ್ಷ ನಡೆದಿದ್ದ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಿಗಾಗಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು ಕೇವಲ 355 ಕೋ.ರೂ.ಗಳ ದೇಣಿಗೆಗಳನ್ನು ಸಂಗ್ರಹಿಸಿದ್ದವಾದರೂ, 573.24 ಕೋ.ರೂ.ಗಳನ್ನು ವ್ಯಯಿಸಿದ್ದವು.
ಈ ಪೈಕಿ ರಾಷ್ಟ್ರೀಯ ಪಕ್ಷಗಳು ಒಟ್ಟು 287.89 ಕೋ.ರೂ.ಗಳನ್ನು ಸಂಗ್ರಹಿಸಿ 188.12 ಕೋ.ರೂ.ಗಳನ್ನು ವ್ಯಯಿಸಿದ್ದರೆ, ಪ್ರಾದೇಶಿಕ ಪಕ್ಷಗಳು ಒಟ್ಟು 67.22 ಕೋ.ರೂ.ಗಳನ್ನು ಸಂಗ್ರಹಿಸಿ 213.97 ಕೋ.ರೂ.ಗಳನ್ನು ವೆಚ್ಚ ಮಾಡಿದ್ದವು ಎಂದು ಚಿಂತನ ಚಿಲುಮೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯು ತಿಳಿಸಿದೆ.

ಹಲವು ಪಕ್ಷಗಳು ನಗದು/ಚೆಕ್ ಮೂಲಕ ತಮ್ಮ ಚುನಾವಣಾ ವೆಚ್ಚವನ್ನು ಘೋಷಿಸುವಾಗ ತಮ್ಮ ಅಭ್ಯರ್ಥಿಗಳಿಗಾಗಿ ತಾವು ಮಾಡಿರುವ ವೆಚ್ಚಗಳನ್ನು ಸೇರಿಸಿಲ್ಲ. ಹೀಗಾಗಿ ನಗದು/ಚೆಕ್ ಮೂಲಕ (402.09 ಕೋ.ರೂ.) ಮತ್ತು ವಿವಿಧ ಶೀರ್ಷಿಕೆಗಳಡಿ (573.24 ಕೋ.ರೂ.) ಒಟ್ಟು ವೆಚ್ಚದಲ್ಲಿ ವ್ಯತ್ಯಾಸವಿದೆ ಎಂದು ವರದಿಯು ಹೇಳಿದೆ.

2016ರ ವಿಧಾನಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಚಾರ, ಪ್ರಯಾಣ ವೆಚ್ಚ, ಇತರ ವೆಚ್ಚಗಳು ಮತ್ತು ಅಭ್ಯರ್ಥಿಗಳಿಗೆ ನೀಡಿದ ಮೊತ್ತ ಸೇರಿದಂತೆ ಒಟ್ಟು 573.24 ಕೋ.ರೂ.ಗಳನ್ನು ಖರ್ಚು ಮಾಡಿವೆ.

 ಕೇಂದ್ರ ಮತ್ತು ರಾಜ್ಯಮಟ್ಟಗಳಲ್ಲಿ ಆರು ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿಯು 131.72 ಕೋ.ರೂ.ಗಳ ಗರಿಷ್ಠ ಮೊತ್ತವನ್ನು ಸಂಗ್ರಹಿಸಿ ಒಟ್ಟು 112.14 ಕೋ.ರೂ.ಗಳನ್ನು ಖರ್ಚು ಮಾಡಿದ್ದರೆ, 94.23 ಕೋ.ರೂ.ದೇಣಿಗೆ ಸಂಗ್ರಹದೊಂದಿಗೆ ಎರಡನೇ ಸ್ಥಾನದಲ್ಲಿ ರುವ ಕಾಂಗ್ರೆಸ್ 41.49 ಕೋ.ರೂ.ಗಳನ್ನು ವ್ಯಯಿಸಿದೆ.

ಪ್ರಾದೇಶಿಕ ಪಕ್ಷಗಳ ಪೈಕಿ ಎಸ್‌ಪಿ ಗರಿಷ್ಠ ದೇಣಿಗೆ (35.66 ಕೋ.ರೂ.) ಸಂಗ್ರಹಿಸಿ ದ್ದರೆ ಡಿಎಂಕೆ ಅತ್ಯಧಿಕ ಹಣ (97.34 ಕೋ.ರೂ.)ವನ್ನು ವ್ಯಯಿಸಿದೆ. ಎಐಎಡಿಎಂಕೆ 64.72 ಕೋ.ರೂ.ಗಳನ್ನು ಖರ್ಚು ಮಾಡಿತ್ತು.

ಸಿಪಿಎಂನ ಕೇರಳ ಘಟಕವು ಪಕ್ಷದ ಒಟ್ಟು ದೇಣಿಗೆಯ ಶೇ.55.49(28.79ಕೋ.ರೂ.) ಸಂಗ್ರಹಿಸಿದ್ದರೆ ಪ.ಬಂಗಾಳ ಘಟಕವು ಶೇ.33.81(17.54 ಕೋ.ರೂ.)ರಷ್ಟು ಕೊಡುಗೆ ಯನ್ನು ನೀಡಿತ್ತು.

ಚುನಾವಣೆಗಳಿಗಾಗಿ ತಾನು ಯಾವುದೇ ದೇಣಿಗೆಗಳನ್ನು ಸಂಗ್ರಹಿಸಿಲ್ಲ ಎಂದು ಬಿಎಸ್‌ಪಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News