×
Ad

‘ನಂಡೆ ಪೆಂಙಳ್’ ಅಭಿಯಾನದಡಿ ವರ ಅನ್ವೇಷಣೆಗೆ ಸಹಕರಿಸಲು ಮನವಿ

Update: 2017-07-06 20:38 IST

ಮಂಗಳೂರು,ಜು.6: ಟ್ಯಾಲೆಂಟ್ ವತಿಯಿಂದ ಕಳೆದ 7 ವರ್ಷಗಳಲ್ಲಿ 169 ಸಹೋದರಿಯರ ಮದುವೆಗೆ ಸಹಕರಿಸಲಾಗಿದೆ. ಇದೇ ಉದ್ದೇಶಕ್ಕಾಗಿ ಹುಟ್ಟಿಕೊಂಡ ನಂಡೆ ಪೆಂಙಳ್’ ಅಭಿಯಾನವು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಕೇವಲ ಮೂರು ತಿಂಗಳಲ್ಲೇ 15 ಸಹೋದರಿಯರ ಮದುವೆ ನಡೆಸಿದೆ ಹಾಗೂ ಅತೀ ಶೀಘ್ರದಲ್ಲಿ ಹಲವು ಸಹೋದರಿಯರ ಮದುವೆ ನಡೆಯಲಿದೆ.

ಆದರೂ ಸೂಕ್ತ ವರ ಸಿಗದೆ ಅನೇಕ ಸಹೋದರಿಯರು ಬಾಕಿ ಉಳಿದಿರುತ್ತಾರೆ. ಇವರಿಗೆ ಕೂಡಲೇ ಸೂಕ್ತ ವರನನ್ನು ಹುಡುಕಿ ಮದುವೆ ಮಾಡಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಈ ಯೋಜನೆಯಡಿಯಲ್ಲಿ ಮದುವೆಯಾಗುವ ಹೆಣ್ಮಕ್ಕಳ ವಿವರ ನಮ್ಮಲ್ಲಿದೆ. ಪ್ರತೀ ಜಮಾಅತ್‌ನಲ್ಲಿ ಸದರಿ ಹೆಣ್ಮಕ್ಕಳನ್ನು ಮದುವೆಯಾಗಲು ಬಯಸುವ ಅವಿವಾಹಿತ ಯುವಕರು, ಹೆಂಡತಿ ತೀರಿದವರು ಮತ್ತು ವಿವಾಹ ವಿಚ್ಛೇದಿತ ಗಂಡಸರ ಮಾಹಿತಿಯನ್ನು ನೀಡಿ ನಮ್ಮೊಂದಿಗೆ ಸಹಕರಿಸುವುದು. ಪ್ರತೀ ಜಮಾಅತ್‌ನಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಉಲಮಾಗಳು, ಜಮಾಅತ್ ಕಮಿಟಿ ಮತ್ತು ಸಂಘಸಂಸ್ಥೆಗಳು ಪ್ರಯತ್ನಿಸುವಂತೆ ನಂಡೆ ಪೆಂಙಳ್ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಪತ್ರಿಕಾ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: 9945613699, 9972283365

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News