×
Ad

ಜೋಧ್‌ಪುರ ಸಮೀಪ ಐಎಎಫ್ ಜೆಟ್ ಪತನ

Update: 2017-07-06 21:31 IST

ಜೋಧ್‌ಪುರ, ಜು. 6: ಭಾರತೀಯ ವಾಯು ಪಡೆಯ ಮಿಗ್-23ಯುಬಿ ಜೆಟ್ ಟ್ರೈನರ್ ರಾಜಸ್ಥಾನ ಜೋಧ್‌ಪುರ್ ಸಮೀಪದ ಬಲೇಸಾರ್‌ನಲ್ಲಿ ಪತನಗೊಂಡಿದೆ.

  ಜೆಟ್‌ನಲ್ಲಿದ್ದ ಇಬ್ಬರು ಪೈಲೆಟ್‌ಗಳು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ತರಬೇತಿಯಲ್ಲಿರುವಾಗ ಜೋಧ್‌ಪುರದಿಂದ 60 ಕಿ.ಮೀ. ದೂರದಲ್ಲಿರುವ ಪ್ರದೇಶದಲ್ಲಿ ಜೆಟ್ ಪತನ ಹೊಂದಿತು ಎಂದು ಐಎಎಫ್ ಮೂಲಗಳು ತಿಳಿಸಿವೆ.

ಐಎಎಫ್‌ನ ಮಿಗ್ 27 ಫೈಟರ್‌ಗೆ ಪೈಲೆಟ್‌ಗಳನ್ನು ತರಬೇತುಗೊಳಿಸಲು ಮಿಗ್-23 ಯುಬಿ ಟ್ರೈನರ್ಸ್‌ನ್ನು ಬಳಸಲಾಗುತ್ತದೆ ನ್ಯಾಯಾಲಯ ತನಿಖೆಗೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News