ಬೈಕಂಪಾಡಿ ಅಟೋರಿಕ್ಷಾ ಸಂಘದಿಂದ ಶಾಲಾ ಮಕ್ಕಳ ದತ್ತು ಸ್ವೀಕಾರ
Update: 2017-07-06 21:50 IST
ಮಂಗಳೂರು, ಜು. 6: ಬೈಕಂಪಾಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಬೈಕಂಪಾಡಿ ಪರಿಸರದ ಆರು ಬಡ ಮಕ್ಕಳ ಶೈಕ್ಷಣಿಕ ದತ್ತು ಪಡೆಯಲಾಗಿದೆ.
ಬೈಕಂಪಾಡಿ ಗ್ರಾಮದ ಮೂರು ಸರಕಾರಿ ಶಾಲೆಗಳ ತಲಾ ಇಬ್ಬರು ಮಕ್ಕಳಂತೆ ಒಟ್ಟು ಆರು ಮಕ್ಕಳಿಗೆ ಸಮವಸ್ತ್ರ, ಪುಸ್ತಕ, ಶುಲ್ಕ ಸೇರಿದಂತೆ ಇಡೀ ವರ್ಷದ ಸಂಪೂರ್ಣ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಬೈಕಂಪಾಡಿ ಆಟೋ ರಿಕ್ಷಾ ಸಂಘವು ಭರಿಸಲಿದೆ.
ಈ ಸಂಬಂಧ ಬೈಕಂಪಾಡಿ ಅಂಗರಗುಂಡಿ ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ಸಂಘವು ದತ್ತು ಸ್ವೀಕಾರ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಿಸಲಾಯಿತು. ಬೈಕಂಪಾಡಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ನವೀನ್ ಶ್ರೀಯಾನ್, ಉಪಾಧ್ಯಕ್ಷ ಅನಿಲ್, ಕಾರ್ಯದರ್ಶಿ ಅಬ್ದುಲ್ ಗಫೂರ್, ಜೊತೆ ಕಾರ್ಯದರ್ಶಿ ರೋಹಿತ್, ಕೋಶಾಧಿಕಾರಿ ಸುಧೀರ್, ಸಂಘಟನಾ ಕಾರ್ಯದರ್ಶಿ ದೇವದಾಸ್, ಎಸ್‌ಡಿಎಂಸಿ ಅಧ್ಯಕ್ಷ ಇಲ್ಯಾಸ್, ಮನ್ಸೂರ್, ಬಾವಾ, ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕರು ಉಪಸ್ಥಿತರಿದ್ದರು.