ತಮಿಳುನಾಡು: ಚಿತ್ರಮಂದಿರ ಬಂದ್ ಹಿಂದಕ್ಕೆ
Update: 2017-07-06 21:58 IST
ಚೆನ್ನೈ, ಜು. 6: ಚಿತ್ರಬಂದಿರ ಬಂದ್ ಅನ್ನು ತಮಿಳುನಾಡು ಚಿತ್ರಮಂದಿರ ಮಾಲಕರ ಸಂಘ ಹಿಂದೆಗೆದುಕೊಂಡಿದೆ. ಜುಲೈ 7ರಂದು ಚಿತ್ರಮಂದಿರಗಳು ಮತ್ತೆ ಆರಂಭ ವಾಗಲಿವೆ ಎಂದು ಸಂಘದ ಅಧ್ಯಕ್ಷ ಅಭಿರಾಮಿ ರಾಮನಾಥನ್ ತಿಳಿಸಿದ್ದಾರೆ.
ಜುಲೈ 1ರಂದು ಜಿಎಸ್‌ಟಿ ಜಾರಿಗೊಂಡ ಬಳಿಕ ತೆರಿಗೆ ಪ್ರಮಾಣ ಹೆಚ್ಚಾಗುತ್ತಿರುವು ದನ್ನು ವಿರೋಧಿಸಿ ಜುಲೈ 3ರಂದು ಚಿತ್ರಮಂದಿರಗಳ ಬಂದ್‌ಗೆ ತಮಿಳುನಾಡು ಚಿತ್ರಮಂದಿರ ಮಾಲಕರ ಸಂಘ ಕರೆ ನೀಡಿತ್ತು.