×
Ad

ಮಗಳ ಹುಟ್ಟು ಹಬ್ಬದ ಸಂಭ್ರಮಕ್ಕೆ ಹಾರಿಸಿದ ಗುಂಡಿಗೆ ತಾನೇ ಬಲಿಯಾದ

Update: 2017-07-06 22:02 IST

ಕರ್ನಾಲ್, ಜು. 6: ವ್ಯಕ್ತಿಯೋರ್ವ ತನ್ನ ಮಗಳ ಹುಟ್ಟುಹಬ್ಬದ ಸಂಭ್ರಮಕ್ಕೆ ಹಾರಿಸಿದ ಗುಂಡಿಗೆ ತಾನೇ ಬಲಿಯಾದ ದಾರುಣ ಘಟನೆ ಬುಧವಾರ ಹರಿಯಾಣದ ಕರ್ನಲ್‌ನಲ್ಲಿ ಬುಧವಾರ ಸಂಭವಿಸಿದೆ.

 ಕರ್ನಾಲ್‌ನಲ್ಲಿರು ತನ್ನ ಮನೆಯಲ್ಲಿ ರಿಕ್ಷಾ ಚಾಲಕ ಕುಮಾರ್ ಮಗಳ ಹುಟ್ಟು ಹಬ್ಬದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಟೆರೇಸ್‌ಗೆ ತೆರಳಿ ಗುಂಡು ಹಾರಿಸಿದ್ದರು ಆದರೆ, ಗುಂಡು ಅವರಿಗೇ ತಗುಲಿ ಅವರು ಮೃತಪಟ್ಟಿದ್ದಾರೆ.

 ಈ ರೀತಿ ಗುಂಡು ಹಾರಿಸುವ ಸಂಪ್ರದಾಯ ಉತ್ತರಭಾರತದಲ್ಲಿ ವಿವಾದಕ್ಕೀಡಾಗಿತ್ತು. ಕುಮಾರ್ ಎರಡು ವರ್ಷಗಳ ಹಿಂದಿನಿಂದಲೇ ಪರವಾನಿಗೆ ಪಡೆದ ಕೋವಿ ಹೊಂದಿದ್ದ. ಅವರು ಗುಂಡು ಹಾರಿಸುವಾಗ ಒಂದು ಗುಂಡು ಎದೆಗೆ ಹೊಕ್ಕಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಎರಡು ಬ್ಯಾರೆಲ್‌ನ ಪರವಾನಿಗೆ ಹೊಂದಿದ ಕೋವಿಯಿಂದ ತಪ್ಪಾಗಿ ಗುಂಡು ಹಾರಲು ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News