ಸಂಚಾರಿ ನೇತ್ರ ಘಟಕ ಉದ್ಘಾಟನೆ
Update: 2017-07-06 22:21 IST
ಉಡುಪಿ, ಜು.6: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ಜಿಲ್ಲಾ ಆಸ್ಪತ್ರೆಯಲ್ಲಿ ಉಡುಪಿಗೆ ನೀಡಲಾದ ರಾಷ್ಟ್ರೀಯ ವಯೋ ಸಮ್ಮಾನ್ ಪ್ರಶಸ್ತಿ ಮೊತ್ತದ 10 ಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಿದ ಹಿರಿಯ ನಾಗರಿಕರ ಐಸಿಯು ಹಾಗೂ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಸಂಚಾರಿ ನೇತ್ರ ಘಟಕಕ್ಕೆ ಒದಗಿಸಲಾದ ಐಷರ್ ಮಿನಿ ಬಸ್ ಉದ್ಘಾಟನೆ ಜು. 8ರಂದು ಬೆಳಗ್ಗೆ 9:30ಕ್ಕೆ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿದೆ.
ಇವುಗಳನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿ ಸುವರು ಎಂದು ಪ್ರಕಟಣೆ ತಿಳಿಸಿದೆ.