×
Ad

ಅಪಘಾತ ನಡೆಸಿ ಸಾವಿಗೆ ಕಾರಣನಾದ ಆರೋಪಿ ಬಂಧನ

Update: 2017-07-06 22:24 IST

ಮಂಗಳೂರು, ಜು. 6: ಅಪಘಾತ ನಡೆಸಿ ಸಾವಿಗೆ ಕಾರಣನಾದ ಆರೋಪಿಯೊಬ್ಬನನ್ನು ಗುರುವಾರ ಬಜಪೆ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮುಲ್ಕಿ ನಿವಾಸಿ ಮುಹಮ್ಮದ್ ನಾಝೀರ್ ಎಂದು ಗುರುತಿಸಲಾಗಿದೆ. ಈತ ಅಪಘಾತ ಎಸಗಿದ ಬಳಿಕ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿದೇಶದಿಂದ ಬಂದಿಳಿದಾಗ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News