×
Ad

ವಿದ್ಯಾರ್ಥಿಯ ಕೊಲೆಯತ್ನ: ಎಸ್ಸೆಸ್ಸೆಫ್ ಖಂಡನೆ

Update: 2017-07-08 16:07 IST

ಮಂಗಳೂರು, ಜು.8: ನಗರದ ಅಡ್ಯಾರ್ ಪದವಿನಲ್ಲಿ ತರಗತಿ ಮುಗುಸಿ ಮರಳುತ್ತಿದ್ದ ವಿದ್ಯಾರ್ಥಿಗಳಿಬ್ಬರ ಮೇಲೆ ದುಶ್ಕರ್ಮಿಗಳು ಪೆಟ್ರೋಲ್ ಕೇಳುವ ನೆಪದಲ್ಲಿ ಚೂರಿಯಿಂದ ಇರಿದು ಕೊಲೆಯತ್ನ ನಡೆಸಿದ್ದನ್ನು ದ.ಕ.ಜಿಲ್ಲಾ ಕ್ಯಾಂಪಸ್ ಎಸ್ಸೆಸ್ಸೆಫ್ ತೀವೃವಾಗಿ ಖಂಡಿಸಿದೆ.

ಈ ದುಶ್ಕರ್ಮಿಗಳಿಂದಾಗಿ ಜಿಲ್ಲೆಯಲ್ಲಿ ಯಾರೂ ಕೂಡಾ ಸುರಕ್ಷಿತರಲ್ಲವೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗಿನ ದ.ಕ ಜಿಲ್ಲೆಯ ಕೆಲವೊಂದು ಪ್ರಕರಣಗಳು ಉಲ್ಬಣಿಸಿ ವಿದ್ಯಾರ್ಥಿಗಳನ್ನು ಜಾತಿಯ ಆಧಾರದಲ್ಲಿ ಕೊಲೆ ಯತ್ನದ ಹಂತಕ್ಕೂ ತಲುಪಿದ್ದರೆ ಅದು ಈ ನಾಡಿನ ಸರಕಾರ ಮತ್ತು ಕಾನೂನಿನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ. ಆದುದರಿಂದ ಪೋಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಜನರ ಕಣ್ಣಿಗೆ ಮಣ್ಣೆರೆಸಲು ಯಾರನ್ನೂ ಬಲಿ ಕೊಡುವುದಕ್ಕೆ ಬದಲು ನೈಜ ಆರೋಪಿಗಳನ್ನು ಕಾನೂನಿನ ಮುಂದೆ ತಂದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳನ್ನು ತಡೆಗಟ್ಟಬಹುದೆಂದು ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ಚೇರ್'ಮಾನ್ ಕೊಂಬಾಳಿ ಕೆ.ಎಂಎಚ್.ಝುಹುರಿ ಹಾಗೂ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News