ಯಕ್ಷಗಾನ ತರಬೇತಿ ಕೇಂದ್ರಕ್ಕೆ ನಿವೇಶನ: ಮೊಯ್ದಿನ್ ಬಾವಾ
ಮಂಗಳೂರು, ಜು.8: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ನೂತನ ಯೋಜನೆಯಾದ ಯಕ್ಷಗಾನ ತರಬೇತಿ ಕೇಂದ್ರ ಮತ್ತು ಗ್ರಂಥಾಲಯ ಸ್ಥಾಪನೆಗೆ ಸರಕಾರಿ ದರದಲ್ಲಿ ಭೂಮಿಯನ್ನು ಒದಗಿಸಿಕೊಡುವುದಾಗಿ ಶಾಸಕ ಮೊಯ್ದಿನ್ ಬಾವಾ ತಿಳಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳ ನಿಯೋಗವು ಶಾಸಕರನ್ನು ಅವರ ಮನೆಯಲ್ಲಿ ಭೇಟಿಯಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಾವಿದರಿಗೆ ಆಸರೆಯಾಗಿ ಪಟ್ಲ ಫೌಂಡೇಶನ್ ಟ್ರಸ್ಟ್ ಕೈಗೊಳ್ಳುವ ಯೋಜನೆಗೆ ಸ್ಪಂದಿಸುವಂತೆ ಮನವಿ ಮಾಡಿತು.
ಆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿದ ಶಾಸಕ ಮೊಯ್ದಿನ್ ಬಾವಾ ಪಟ್ಲ ಫೌಂಡೇಶನ್‌ನ ಮುಖ್ಯ ಬೇಡಿಕೆಯಾದ ಯಕ್ಷಗಾನ ತರಬೇತಿ ಕೇಂದ್ರ ಹಾಗೂ ಗ್ರಂಥಾಲಯಕ್ಕೆ ಕ್ಷೇತ್ರ ವ್ಯಾಪ್ತಿಯ ಮುಚ್ಚೂರಿನಲ್ಲಿ ಎಂಟು ಎಕರೆ ಜಾಗವನ್ನು ಸರಕಾರಿ ದರದಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ದುಬಾಯಿ ಘಟಕದ ಟ್ರಸ್ಟಿ ರಘುರಾಮ ಶೆಟ್ಟಿ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಟ್ರಸ್ಟಿ ರವಿ ಶೆಟ್ಟಿ ಅಶೋಕ ನಗರ, ಕಾರ್ಪೊರೇಟರ್ ಗುಣಶೇಖರ ಶೆಟ್ಟಿ, ಪದ್ಮನಾಭ ಎಲ್. ಶೆಟ್ಟಿ, ಶೈಲೇಶ್ ಕೃಷ್ಣಾಪುರ, ದೀಪಕ್ ಶೆಟ್ಟಿ ಕೃಷ್ಣಾಪುರ ನಿಯೋಗದಲ್ಲಿದ್ದರು.