×
Ad

ಭಾರತದಲ್ಲಿರುವ ಚೀನೀಯರಿಗೆ ಸುರಕ್ಷತೆ ಸಲಹೆ ನೀಡಿದ ಚೀನ

Update: 2017-07-08 17:58 IST

  ಬೀಜಿಂಗ್, ಜು.8: ಭಾರತ- ಚೀನಾ ಮಧ್ಯೆ ಸಿಕ್ಕಿಂ ಬಳಿಯ ಗಡಿಯಲ್ಲಿ ಬಿಕ್ಕಟ್ಟು ಮುಂದುವರಿದಿರುವಂತೆಯೇ ಭಾರತದಲ್ಲಿರುವ ತನ್ನ ಪ್ರಜೆಗಳಿಗೆ ಸುರಕ್ಷತೆ ಸಲಹೆ ನೀಡಿರುವ ಚೀನ, ತಮ್ಮ ಸುರಕ್ಷತೆಯ ಕಡೆಗೆ ಗಮನ ನೀಡುವಂತೆ ಮತ್ತು ಭಾರತ ದೇಶದೊಳಗಡೆ ಅನವಶ್ಯಕ ಪ್ರವಾಸ ನಡೆಸದಂತೆ ತಿಳಿಸಿದೆ.

 ಈ ಸಲಹೆ ಒಂದು ತಿಂಗಳವರೆಗೆ ಊರ್ಜಿತದಲ್ಲಿರುತ್ತದೆ. ಭಾರತದಲ್ಲಿರುವ ಚೀನಾದ ಪ್ರಜೆಗಳು ಸ್ಥಳೀಯ ಪೊಲೀಸರು ಅಥವಾ ದಿಲ್ಲಿಯಲ್ಲಿರುವ ಚೀನಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ತಿಳಿಸಲಾಗಿದೆ ಎಂದು ಬೀಜಿಂಗ್‌ನಲ್ಲಿ ಚೀನಾದ ಅಧಿಕಾರಿಯೋರ್ವರು ತಿಳಿಸಿದ್ದಾರೆ.

    ಇದು ಪ್ರಯಾಣ ಸಲಹೆಯಲ್ಲ. ಆದರೆ ಭಾರತದಲ್ಲಿರುವ ಚೀನಾದ ಪ್ರಜೆಗಳು ಸ್ಥಳೀಯ ಭದ್ರತಾ ಪರಿಸ್ಥಿತಿಯೆಡೆ ಗಮನ ಹರಿಸಬೇಕು. ವೈಯಕ್ತಿಕ ಗುರುತು ಪತ್ರವನ್ನು ತಮ್ಮ ಬಳಿ ಇರಿಸಿಕೊಳ್ಳುವಂತೆ ಮತ್ತು ತಾವು ಭೇಟಿ ನೀಡಲಿರುವ ಸ್ಥಳದ ವಿವರವನ್ನು ಕುಟುಂಬದವರಿಗೆ, ಸಹೋದ್ಯೋಗಿಗಳಿಗೆ ಮತ್ತು ಸ್ನೇಹಿತರಿಗೆ ನಿರಂತರ ತಿಳಿಸುತ್ತಿರಬೇಕು ಎಂದು ತಿಳಿಸಲಾಗಿದೆ. ಈ ಸುರಕ್ಷತೆ ಸಲಹೆ ನೀಡಲು ಕಾರಣವನ್ನು ತಿಳಿಸಲಾಗಿಲ್ಲ. ಆದರೆ ಚೀನಾ ವಿರೋಧಿ ಭಾವನೆಯ ಕಾರಣ ಪ್ರಜೆಗಳ ಮೇಲೆ ಹಲ್ಲೆ ನಡೆಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಊಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News