ನಿಟ್ಟೂರು: ಡೆಂಗ್ ಬಾಧಿತ ಪ್ರದೇಶಗಳಿಗೆ ಸಚಿವ ಪ್ರಮೋದ್ ಭೇಟಿ
ಉಡುಪಿ, ಜು.8: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಲೇರಿಯಾ ಹಾಗೂ ಡೆಂಗ್ ರೋಗದಿಂದ ಅತಿ ಹೆಚ್ಚು ಬಾಧಿತವಾಗಿರುವ ನಿಟ್ಟೂರು ವಾರ್ಡಿನ ಹನುಮಂತನಗರ ಪ್ರದೇಶಗಳಿಗೆ ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಮೇ ಒಂದರಿಂದ ಇಂದಿನವರೆಗೆ ಹನುಮಂತನಗರ ಪ್ರದೇಶದ 71 ಮಂದಿಯನ್ನು ಡೆಂಗ್‌ಗಾಗಿ ಪರೀಕ್ಷಿಸಿದಾಗ 51 ಡೆಂಗ್ ಕೇಸುಗಳು ಖಚಿತ ವಾಗಿವೆ. ಡಿಸೆಂಬರ್‌ನಿಂದ ಈವರೆಗೆ 132 ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಪಕ್ಕದ ಕೊಡಂಕೂರು ಪ್ರದೇಶದಲ್ಲಿ ಈ ರೋಗ ವ್ಯಾಪಕ ವಾಗಿದ್ದರೆ, ಈ ವರ್ಷ ಅದು ಹನುಮಂತನಗರಕ್ಕೆ ವ್ಯಾಪಿಸಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೋಹಿಣಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರತ್ನ ಸಚಿವರಿಗೆ ಮಾಹಿತಿ ನೀಡಿದರು.
ಸುಮಾರು ಒಂದು ಗಂಟೆ ಕಾಲ ಸಚಿವರು ಹನುಮಂತನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮನೆ, ಮನೆಗೆ ತೆರಳಿ ಡೆಂಗ್ ರೋಗದ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳು ಕುರಿತು ಮನೆಯವರಿಗೆ ಮನವರಿಕೆ ಮಾಡಿದರು. ರೋಗ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ, ಮನೆಯಲ್ಲಿ ಪ್ಲಾಸ್ಟಿಕ್ ಮುಂತಾದ ಪಾತ್ರೆಗಳಲ್ಲಿ ಶುದ್ಧ ನೀರನ್ನು ತುಂಬಾ ಸಮಯ ಇಟ್ಟುಕೊಳ್ಳದಂತೆ ತಿಳಿಸಿದರು.
ಇಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡುವ ಲಿಂಕ್ ವರ್ಕರ್, ಆರೋಗ್ಯ ಸಹಾಯಕಿಯರು, ನರ್ಸ್‌ಗಳು ನೀಡುವ ಸೂಚನೆಯನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದ ಅವರು, ಹಲವು ಕಡೆಗಳಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸದ, ನೀರು ಸರಾಗವಾಗಿ ಹೋಗಲು ಬೇಕಾದ ವ್ಯವಸ್ಥೆ ಮಾಡದ, ಚರಂಡಿಯಿಂದ ಎತ್ತಿದ ಮಣ್ಣನ್ನು ಅಲ್ಲೇ ಇರಿಸಿ, ಮತ್ತೆ ಅದು ಚರಂಡಿ ಪಾಲಾಗುವಂತೆ ಮಾಡಿದ ನಗರಸಭಾ ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.
ಕೊಡಂಕೂರು ನ್ಯೂ ಕಾಲನಿಯ 160 ಹಾಗೂ ಹನುಮಂತನಗರದ 180 ಮನೆಗಳಿಗೆ ಸೊಳ್ಳೆ ಬಾರದಂತೆ ತಡೆಯುವ ದ್ರಾವಣದಲ್ಲಿ ಅದ್ದಿದ ಸೊಳ್ಳೆ ಪರದೆಯನ್ನು ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಸೊಳ್ಳೆ ಪರದೆ ಸಿಗದ ಸುಂದರ ನಾಯ್ಕೆ ಮತ್ತು ದೇಜು ಕೋಟ್ಯಾನ್ ಕುಟುಂಬಕ್ಕೆ ಅವರು ಸೊಳ್ಳೆಪರದೆಯನ್ನು ವಿತರಿಸಿದರು. ಕೊಡಂಕೂರು ನ್ಯೂ ಕಾಲನಿಯ 160 ಹಾಗೂ ಹನುಮಂತನಗರದ 180 ಮನೆಗಳಿಗೆ ಸೊಳ್ಳೆ ಬಾರದಂತೆ ತಡೆಯುವ ದ್ರಾವಣದಲ್ಲಿ ಅದ್ದಿದ ಸೊಳ್ಳೆ ಪರದೆಯನ್ನು ವಿತರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಸೊಳ್ಳೆ ಪರದೆ ಸಿಗದ ಸುಂದರ ನಾಯ್ಕೆ ಮತ್ತು ದೇಜು ಕೋಟ್ಯಾನ್ ಕುಟುಂಬಕ್ಕೆ ಅವರು ಸೊಳ್ಳೆಪರದೆಯನ್ನು ವಿತರಿಸಿದರು. ಸಚಿವರು ಭೇಟಿ ನೀಡಿದ ಹೆಚ್ಚಿನ ಮನೆಗಳ ಹೊರಗೆ ವಿವಿಧ ಗಾತ್ರದ ಪ್ಲಾಸ್ಟಿಕ್ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸಿಟ್ಟಿರುವುದು ಕಂಡುಬಂತು. ಈ ಪಾತ್ರೆಗಳ ಶುದ್ಧ ನೀರಿನಲ್ಲೇ ಡೆಂಗ್ ರೋಗ ಹರಡುವ ಈಡೀಸ್ ಸೊಳ್ಳೆ ಮೊಟ್ಟೆ ಇಟ್ಟು ವಂಶಾಭಿವೃದ್ಧಿಯಾಗುತ್ತದೆ. ಅದೇ ರೀತಿ ಮನೆಯ ಸುತ್ತ ಎಸೆಯುವ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆಯಿಂದ ರೋಗ ಹರಡುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಸಚಿವರು ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ತೆರಳಿ ಮಹಿಳೆಯರಿಗೆ ಹಾಗೂ ಮನೆಯಲ್ಲಿದ್ದ ಹಿರಿಯರಿಗೆ ಸ್ವಚ್ಛತೆ ಕುರಿತು, ನೀರು ನಿಲ್ಲದಂತೆ ನೋಡಿಕೊಳ್ಳುವ ಕುರಿತು ತಿಳಿ ಹೇಳಿದರು. ಮೊದಲ ಹಂತದ ಡೆಂಗ್ ಜ್ವರ, ಚಿಕಿತ್ಸೆಯ ಮೂಲಕ ಸುಲಭವಾಗಿ ಗುಣವಾಗುತ್ತದೆ. ಆದರೆ ಇನ್ನೊಮ್ಮೆ ಡೆಂಗ್ ಜ್ವರ ಬಾರದಂತೆ ನೋಡಿಕೊಳ್ಳಬೇಕು. ಆಗ ರೋಗನಿರೋಧಕ ಶಕ್ತಿ ದೇಹಕ್ಕೆ ಇಲ್ಲದೇ ಹೋದರೆ ತೊಂದರೆಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ನಿಟ್ಟೂರು ವಾರ್ಡ್‌ನ ಅಭಿವೃದ್ಧಿಗಾಗಿ ಪ್ರಸ್ತಾವನೆಯೊಂದನ್ನು ರಾಜ್ಯ ಕೊಳಚೆ ಪ್ರದೇಶ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದೆ. ಈ ಪ್ರದೇಶದಲ್ಲಿ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ರೋಗದ ಕುರಿತು ಜನರಿಗೆ ಅರಿವು ಮೂಡಿಸುತಿದ್ದಾರೆ. ಈ ದಿಶೆಯಲ್ಲಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಈಗ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು. ನಿಟ್ಟೂರು ವಾರ್ಡ್‌ನ ಅಭಿವೃದ್ಧಿಗಾಗಿ ಪ್ರಸ್ತಾವನೆಯೊಂದನ್ನು ರಾಜ್ಯ ಕೊಳಚೆ ಪ್ರದೇಶ ನಿಯಂತ್ರಣ ಮಂಡಳಿಗೆ ಕಳುಹಿಸಲಾಗಿದೆ. ಈ ಪ್ರದೇಶದಲ್ಲಿ ಅಧಿಕಾರಿಗಳು ಮನೆ-ಮನೆಗೆ ೇಟಿನೀಡಿರೋಗದಕುರಿತುಜನರಿಗೆಅರಿವುಮೂಡಿಸುತಿದ್ದಾರೆ. ಈದಿಶೆಯಲ್ಲಿನಗರಸೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಈಗ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಸಚಿವರು ತಿಳಿಸಿದರು.
ಈ ರೋಗದ ನಿಯಂತ್ರಣಕ್ಕೆ ಕಳೆದ ಡಿಸೆಂಬರ್ ತಿಂಗಳಿನಿಂದಲೇ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಾರಿ ಮಾರ್ಚ್-ಎಪ್ರಿಲ್ ತಿಂಗಳಿ ನಿಂದಲೇ ಕುಡಿಯುವ ನೀರಿಗೆ ಭಾರೀ ಸಮಸ್ಯೆ ಎದುರಾಗಿದ್ದರಿಂದ ಜನರು ನೀರನ್ನು ಸಂಗ್ರಹಿಸಿಟ್ಟುಕೊಳ್ಳತೊಡಗಿದ್ದು, ಇದರಿಂದ ರೋಗವಾಹನ ಈಡೀಸ್ ಸೊಳ್ಳೆಯ ಮೂಲಕ ರೋಗ ಈ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದೆ ಎಂದು ಡಾ.ನಾಗರತ್ನ ವಿವರಿಸಿದರು.
ನಿಟ್ಟೂರು ವಾರ್ಡಿನ ಕೊಡಂಕೂರಿನ 258, ಕೊಡಂಕೂರು ನ್ಯೂಕಾಲನಿಯ 198, ಹನುಮಂತ ನಗರ ಎಸ್ಟಿ ಕಾಲನಿಯ 120 ಮತ್ತು 130, ಹನುಮಂತ ನಗರದ 184, ರಾಜೀವ ನಗರದ 155, ನಿಟ್ಟೂರಿನ 225 ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು, ದಾದಿಯರು ಪ್ರತಿವಾರ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡುತಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳುತಿದ್ದಾರೆ ಎಂದು ಡಾ.ಪ್ರೇಮಾನಂದ್ ತಿಳಿಸಿದರು.
ಸಚಿವರ ಭೇಟಿಯ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾಯುಕ್ತ ಡಿ.ಮಂಜುನಾಥಯ್ಯ, ನಿಟ್ಟೂರಿನ ನಗರಸಭಾ ಸದಸ್ಯೆ ರಶ್ಮಿತಾ ಬಾಲಕೃಷ್ಣ, ಜನಾರ್ದನ ಭಂಡಾರ್‌ಕರ್, ಸುಜಯ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.