×
Ad

ಜು.10: ‘ಬರ್ಗರ್ ಲಾಂಜ್’ ಉದ್ಘಾಟನೆ

Update: 2017-07-08 20:58 IST

ಮಂಗಳೂರು, ಜು.8: ಕೇರಳದಲ್ಲಿ ಈಗಾಗಲೇ ವಿಭಿನ್ನ ಬರ್ಗರ್ ತಿಂಡಿ ತಿನಿಸುಗಳ ಮೂಲಕ ಮನೆ ಮಾತಾಗಿರುವ "ಬರ್ಗರ್ ಲಾಂಜ್‌"ನ ಮಳಿಗೆಯು ಮಂಗಳೂರಿನ ಕೊಡಿಯಾಲ್‌ಬೈಲ್ ಬಳಿ ಜು.10ರಂದು ಉದ್ಘಾಟನೆಗೊಳ್ಳಲಿದೆ.

ಕೆನರಾ ಕಾಲೇಜು ರಸ್ತೆಯ ದಿವ್ಯಾ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಅಂದು ಸಂಜೆ 4ಕ್ಕೆ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಮಳಿಗೆಯನ್ನು ಉದ್ಘಾಟಿಸಲಿರುವರು.

ಶಾಸಕ ಜೆ.ಆರ್. ಲೋಬೊ, ಮೇಯರ್ ಕವಿತಾ ಸನಿಲ್, ಎಸಿಪಿ ವಲೈಂಟಿನ್ ಡಿಸೋಜ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್, ಸದಸ್ಯರಾದ ನವೀನ್‌ಚಂದ್ರ ಕೆ., ಕೋಮಲ್ಸ್ ಸ್ವೀಟ್ಸ್‌ನ ಗಣೇಶ್ ನಾಗ್ವೇಕರ್, ಹಾಜಿ ಕೆ.ಪಿ. ಅಹ್ಮದ್, ಹಾಜಿ ಮುಹಮ್ಮದ್ ಇಸ್ಮಾಯೀಲ್, ಅಬ್ದುಲ್ಲತೀಫ್, ಬಶೀರ್, ಮುಹಮ್ಮದ್ ಇಕ್ಬಾಲ್, ವೌಲಾನಾ ಅಬ್ದುಲ್ ಅಝೀಝ್ ದಾರಿಮಿ, ಅಬ್ದುಲ್ ಮಜೀದ್ ಸಿತಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಳಿಗೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಜಾ, ಸ್ವಾದಿಷ್ಟಕರ ಬರ್ಗರ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ವಿವಿಧ ರೀತಿಯ ತಾಜಾ ಜ್ಯೂಸ್‌ಗಳು ಕೂಡಾ ಇಲ್ಲಿ ಲಭ್ಯವಿರುವುದಾಗಿ ಬರ್ಗರ್ ಲಾಂಜ್‌ನ ಮಾಲಕ ಅಬ್ದುಲ್ ವಾಹಿದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News