ಬಿ.ಸಿ.ರೋಡ್‌ನಲ್ಲಿ ಅಹಿತಕರ ಘಟನೆ: 13 ಮಂದಿ ವಶ
Update: 2017-07-08 21:37 IST
ಬಂಟ್ವಾಳ, ಜು. 8: ಬಿ.ಸಿ.ರೋಡ್‌ನಲ್ಲಿ ಶನಿವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಶನಿವಾರ ರಾತ್ರಿಯವರೆಗೆ 13 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಿ.ಸಿ.ರೋಡಿನ ಕೈಕಂಬದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವುದು ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಗೊಳಿಸಿರುವ ಕುರಿತಂತೆ ಒಟ್ಟು ಎರಡು ಪ್ರಕರಣಗಳು ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿವೆ.
ಕಲ್ಲುಗಳು ತುಂಬಿದ್ದ ಓಮ್ನಿ ವಶಕ್ಕೆ: ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲಾಗಿದೆ. ಪ್ರಮುಖ ರಸ್ತೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪ್ರತೀ ವಾಹನಗಳನ್ನು ತಪಾಸನೆ ನಡೆಸಲಾಗುತ್ತಿದೆ. ಕಡಗೋಳಿ ಎಂಬಲ್ಲಿ ಕಲ್ಲುಗಳು ತುಂಬಿದ್ದ ಓಮ್ನಿ ಕಾರು ಮತ್ತು ಅದರಲ್ಲಿದ್ದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.