×
Ad

​ನರ್ಮ್ ಬಸ್ ಸಂಚಾರ ಸ್ಥಗಿತಗೊಳಿಸದಂತೆ ಮನವಿ

Update: 2017-07-08 22:28 IST

ಉಡುಪಿ, ಜು.8: ಗ್ರಾಮೀಣ ಪ್ರದೇಶಗಳ ಜನರಿಗೆ ವರದಾನವಾಗಿರುವ ಹಾಗೂ ಸುಗಮ ಸಂಚಾರಕ್ಕೆ ಅನುಕೂಲಕರ ವಾಗಿರುವ ಸರಕಾರಿ ನರ್ಮ್ ಬಸ್ ಸಂಚಾರವನ್ನು ಸ್ಥಗಿತಗೊಳಿಸದಂತೆ ಮಲ್ಪೆ ಪಡುಕರೆಯ ಜನಸ್ಪಂದನ ಸಮಿತಿಯು ಆಗ್ರಹಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಪ್ರಯತ್ನ ಹಾಗೂ ಕಾಳಜಿಯಿಂದ ಪ್ರಾರಂಭಗೊಂಡಿರುವ ನರ್ಮ್ ಬಸ್ ಸಂಚಾರಕ್ಕೆ ಇತ್ತೀಚೆಗೆ ಸಿಟಿ ಬಸ್ ಮಾಲಕರು ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿರುವುದು ಬೇಸರದ ವಿಷಯ ಎಂದು ಸಮಿತಿ ತಿಳಿಸಿದೆ.
 

ನರ್ಮ್ ಬಸ್‌ಗಳ ಸಂಚಾರ ಸ್ಥಗಿತಗೊಂಡಲ್ಲಿ ಇದನ್ನೇ ಅವಲಂಬಿಸಿರುವ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಹಾಗೂ ನಿತ್ಯ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗಲಿದೆ. ಆದುದರಿಂದ ಯಾವುದೇ ಕಾರಣಕ್ಕೂ ನರ್ಮ್ ಬಸ್ ಸಂಚಾರ ಸ್ಥಗಿತಗೊಳಿಸದಂತೆ ಜನಸ್ಪಂದನ ಪಡುಕರೆ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News