×
Ad

ಕಿನ್ನಿಗೋಳಿ: ದೇವಳದಲ್ಲಿ ಕಳವು

Update: 2017-07-09 10:57 IST

ಮಂಗಳೂರು, ಜು. 9: ಕಿನ್ನಿಗೋಳಿಯ ಗುತ್ತಕಾಡಿನ ಮೂಕಾಂಬಿಕಾ ದೇವಳದಲ್ಲಿ ಶನಿವಾರ ತಡ ರಾತ್ರಿ ಕಳವು ನಡೆದ ಬಗ್ಗೆ ವರದಿಯಾಗಿದೆ.

ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ನಗ- ನಗದು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ.  

ಬೆಳ್ಳಿಯ ಪ್ರಭಾವಳಿ, ಮುಖವಾಡ, ನಗದು ಸೇರಿ ಸುಮಾರು 6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎಂದು ದೇವಳದ ಮೂಲಗಳು ತಿಳಿಸಿವೆ.

ಮುಲ್ಕಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News