×
Ad

ಇಂಜಿನಿಯರ್ ವಿರುದ್ಧ ಇಲಾಖಾಧಿಕಾರಿಗೆ ದೂರು: ಜಯಂತಿ ಬಲ್ನಾಡು

Update: 2017-07-09 16:10 IST

ಪುತ್ತೂರು, ಜು.9: ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ನಡೆಸಿದ ಸಂದರ್ಭದಲ್ಲಿ ನಗರಸಭಾ ಅಧಿಕಾರಿಗಳು ಹಾಗೂ ಎಂಜಿನಿಯರ್‌ರೊಂದಿಗೆ ಸಮಾಲೋಚನೆ ಮಾಡದೆ ತರಾತುರಿಯಲ್ಲಿ ಕಾಮಗಾರಿ ನಡೆಸಿರುವುದರಿಂದ ನಗರಸಭೆಯ ಜನತೆಗೆ ನೀರು ಸರಬರಾಜು ಮಾಡುವಲ್ಲಿ ತೊಂದರೆಯಾಗಿದ್ದು, ನಗರಸಭೆಗೆ ನಷ್ಟ ಉಂಟಾಗಿರುತ್ತದೆ. ಈ ಸಮಸ್ಯೆಗೆ ಕಾರಣವಾಗಿರುವ ಕುರಿತು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ತಿಳಿಸಿದ್ದಾರೆ.

ನೆಕ್ಕಿಲಾಡಿ ಪಂಪು ರೇಚಕ ಸ್ಥಾವರದಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಆಗುತ್ತಿರುವ ಕೊಳವೆಗೆ ಹಾನಿಗೀಡಾಗಿರುವ ಪಲ್ಲತ್ತಾರು ಪ್ರದೇಶಕ್ಕೆ ಶನಿವಾರ ಸದಸ್ಯರಾದ ಮಹಮ್ಮದ್ ಆಲಿ, ಮುಖೇಶ್ ಕೆಮ್ಮಿಂಜೆ ಮತ್ತಿತರರ ಜೊತೆ ಭೇಟಿ ನೀಡಿ ಪರಿಶೀಲಿಸಿದ ಅವರು ಈ ವಿಷಯವನ್ನು ತಿಳಿಸಿದ್ದಾರೆ.  

ನಗರಸಭಾ ವ್ಯಾಪ್ತಿಯ ಜನರಿಗೆ ಹಲವು ದಿನಗಳಿಂದ ನೀರು ಸರಬರಾಜು ಮಾಡಲು ತೊಂದರೆಯಾಗಿರುತ್ತದೆ. ಉಪ್ಪಿನಂಗಡಿ-ಪುತ್ತೂರು ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಸಗರಸಭಾ ನೀರು ಸರಬರಾಜು ಪೈಪ್‌ಲೈನಿಗೆ ಹಾನಿಯಾಗದ ರೀತಿಯಲ್ಲಿ ಕಾಂಕ್ರೀಟ್ ಮೋರಿ ರಚನೆ ಮಾಡುವ ಬದಲು ಅವೈಜ್ಞಾನಿಕವಾಗಿ ನಗರಸಭಾ ನೀರಿನ ಪೈಪಿನ ಮೇಲೆ ಸಿಮೆಂಟ್ ಪೈಪ್ ಮೋರಿ ಹಾಕಿ ಡಾಮರೀಕರಣ ಮಾಡಿರುವುದರಿಂದ ಘನ ವಾಹನಗಳು ಸಂಚರಿಸಿ ಇವರು ಹಾಕಿರುವ ಸಿಮೆಂಟ್ ಪೈಪ್ ಮೋರಿ ಅಳವಡಿಸಿರುವ ಕಾರಣ ಭಾರ ತಡೆಯಲಾರದೆ ನೀರಿನ ಪೈಪಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.  

ನಗರಸಭೆಯ ಅವಿರತ ಶ್ರಮದಿಂದ ಹಾನಿಯಾಗಿರುವ ನೀರಿನ ಕೊಳವೆಯನ್ನು ದುರಸ್ಥಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಗರಸಭಾ ನೀರಿನ ಮೇಲುಸ್ತುವಾರಿ ವಸಂತ ಹಾಗೂ ನೀರಿನ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News