×
Ad

ಮುಂಬೈ: ಮೋನೋ ರೈಲುಗಳ ಢಿಕ್ಕಿ

Update: 2017-07-09 19:57 IST

ಮುಂಬೈ, ಜು. 9: ಇಲ್ಲಿನ ಚೆಂಬೂರ್‌ನಲ್ಲಿ ಎರಡು ಮೋನೋ ರೈಲುಗಳು ಮುಖಾಮುಖಿಯಾಗಿವೆ

 ಶನಿವಾರ ಸಂಜೆ ಎರಡು ರೈಲುಗಳು ವಿರುದ್ಧ ದಿಕ್ಕಿನೆಡೆ ಸಂಚರಿಸಿದ್ದು, ಚೆಂಬೂರ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿ ಢಿಕ್ಕಿಯಾಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ವಿದ್ಯುತ್ ನಿಲುಗಡೆಯಾದುದರಿಂದ ಒಂದು ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವಾಡಾಲ ಡಿಪೋದಿಂದ ಇನ್ನೊಂದು ರೈಲನ್ನು ಕಳುಹಿಸಿ ಪ್ರಯಾಣಿಕರನ್ನು ರಕ್ಷಿಸಿದರು. ಮೋನೋ ರೈಲುಗಳಲ್ಲಿ ಯಾವುದೇ ವಿಭಾಗಗಳಿಲ್ಲ. ಆದುದರಿಂದ ಎಲ್ಲ ಪ್ರಯಾಣಿಕರು ಹಿಂಭಾಗದಲ್ಲಿರುವ ಪ್ಲಾಟ್ ಫಾರ್ಮ್‌ಲ್ಲೇ ಇಳಿಯಬೇಕು. ಇದಕ್ಕೆ ರೈಲು ಚಾಲಕ ಸಹಾಯ ಮಾಡಿದರು.

ನಾಳೆಯಿಂದ ಮೋನೋ ರೈಲು ವೇಳಾಪಟ್ಟಿ ಪ್ರಕರಾ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News