×
Ad

ಕರಾವಳಿಯಲ್ಲಿ "ಗುಜರಾತ್ ಹತ್ಯಾಕಾಂಡ"ದ ಬೆದರಿಕೆಯೊಡ್ಡಿದ “ವೀರ ಕೇಸರಿ” ಫೇಸ್ಬುಕ್ ಪೇಜ್

Update: 2017-07-09 20:23 IST

ಮಂಗಳೂರು, ಜು.9: ದ.ಕ.ಜಿಲ್ಲೆ ಕೋಮುಗಲಭೆಗೆ ತುತ್ತಾಗಿರುವ ನಡುವೆಯೇ ಫೇಸ್ಬುಕ್ ನಲ್ಲಿ ಪ್ರಚೋದನಕಾರಿ ಪೋಸ್ಟ್ ಒಂದನ್ನು ಹಾಕಿರುವ “ವೀರ ಕೇಸರಿ” ಪೇಜ್, ಕರಾವಳಿಯಲ್ಲಿ "ಗುಜರಾತ್ ಮಾದರಿ"ಯ ಹತ್ಯಾಕಾಂಡ ನಡೆಸುವ ಬೆದರಿಕೆಯೊಡ್ಡಿದೆ.

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಶವಯಾತ್ರೆಯ ವೇಳೆ ಬಿ.ಸಿ.ರೋಡ್ ನಲ್ಲಿ ನಡೆದ ಕಲ್ಲುತೂರಾಟದ ಸಂದರ್ಭ “ಪೊಲೀಸರು ಜಿಹಾದಿಗಳಿಗೆ ರಕ್ಷಣೆ ನೀಡಿದ್ದಾರೆ. ಕರಾವಳಿಯ ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಹಿಂದೂಗಳ ತಾಳ್ಮೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಹಿಂದೂ ರೊಚ್ಚಿಗೆದ್ದಾಗ ಗುಜರಾತ್ ನಲ್ಲಿ ಏನು ಆಯಿತು ಎಂದು ನೆನಪಿದೆಯಲ್ಲ” ಎಂದು ಬೆದರಿಕೆ ಹಾಕಲಾಗಿದೆ.

ಜಿಲ್ಲೆಯಲ್ಲಿ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಿದ್ದು, ಈ ನಡುವೆ ಶಾಂತಿ ಕದಡಲು ಯತ್ನಿಸುತ್ತಿರುವ “ವೀರ ಕೇಸರಿ” ಪೇಜ್ ಅಡ್ಮಿನ್ ಮೇಲೆ ಕಠಿಣ ಕಾನೂನು ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ. 

ಕೆಲದಿನಗಳ ಮೊದಲು "ಮಂಗಳೂರು ಮುಸ್ಲಿಂ" ಎನ್ನುವ ಫೇಸ್ಬುಕ್ ಪೇಜ್ ನಲ್ಲೂ ಪ್ರಚೋದನಕಾರಿ ಪೋಸ್ಟ್ ಒಂದು ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News