ಅರಣ್ಯ ಇಲಾಖೆಯ ವಸತಿ ಗೃಹದ ಬಾಗಿಲು ಮುರಿದು ಕಳವು
Update: 2017-07-09 20:52 IST
ಬೆಳ್ತಂಗಡಿ, ಜು. 9: ಮುಂಡಾಜೆಯ ಸೋಮಂತಡ್ಕ ಸಮೀಪ ಅರಣ್ಯ ಇಲಾಖೆಯ ವಸತಿ ಗೃಹದ ಬಾಗಿಲು ಮುರಿದು ಒಳನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ನಡೆದಿದೆ.
ಚಾರ್ಮಾಡಿ ಉಪ ವಲಯಾರಣ್ಯಾಧಿಕಾರಿ ರವೀಂದ್ರ ಎಂಬವರ ವಸತಿ ಗೃಹದಿಂದ ಕಳವಾದ ಬಗ್ಗೆ ವರದಿಯಾಗಿದೆ. ಬಾಗಿಲು ಮುರಿದು ಒಳ ನುಗ್ಗಿದ್ದ ಕಳ್ಳರು ಕಪಾಟಿನಲ್ಲಿದ್ದ ಸುಮಾರು 26 ಗ್ರಾಂ ಚಿನ್ನಾಭರಣ ಹಾಗೂ 9,500 ರೂ. ನಗದು ಕಳವು ಮಾಡಿದ್ದಾರೆ.
ಹಗಲಿನಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಕೃತ್ಯ ನಡೆದಿದೆ. ಸುಮಾರು 77 ಸಾವಿರ ರೂ. ಮೌಲ್ಯದ ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.