ವಾಹನ ಕಳವು: ಆರೋಪಿಗಳಿಬ್ಬರ ಬಂಧನ
Update: 2017-07-09 21:04 IST
ಉಡುಪಿ, ಜು.9: ಮಲ್ಪೆ ಬಂದರಿನಲ್ಲಿ ಜು.8ರಂದು ನಿಲ್ಲಿಸಲಾದ ಮಹೇಂದ್ರ ಬೋಲೇರೋ ಪಿಕ್‌ಅಪ್ ಇನ್ಸ್‌ಲೇಟರ್ ವಾಹನವನ್ನು ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿಯ ರವಿ ನಾಯ್ಕ ಯಾನೆ ವೆಂಕಟೇಶ್ ನಾಯ್ಕ(32) ಮತ್ತು ದಾವಣಗೆರೆ ಜಿಲ್ಲೆಯ ಹರಿಹರದ ಮೈಲಾರಿ(30) ಎಂಬವರನ್ನು ಜು.9ರಂದು ಚಿಕ್ಕಮಂಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಸುಮಾರು 8 ಲಕ್ಷ ಮೌಲ್ಯದ ವಾಹನ ಸಹಿತ ವಶಕ್ಕೆ ಪಡೆದು ಕೊಳ್ಳಲಾಯಿತು.
ಉಡುಪಿ ವೃತ್ತ ನಿರೀಕ್ಷಕ ನವೀನ ಚಂದ್ರ ಜೋಗಿ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆಯ ಎಸ್ಸೈ ದಾಮೋದರ ಕೆ. ನೇತೃತ್ವದಲ್ಲಿ ಪ್ರಬೋಷನರಿ ಎಸ್ಸೈ ಮಧು ಗೌಡ, ಎಎಸ್ಸೈ ಸುಧಾಕರ ಬಿ., ಸಿಬ್ಬಂದಿಗಳಾದ ರಾಘವೇಂದ್ರ, ಪ್ರದೀಪ ಕುಮಾರ್, ಪ್ರವೀಣ, ರಮೇಶ, ಕೃಷ್ಣ ಶೇರಿಗಾರ, ನಾಗೇಶ ಪ್ರವೀಣ, ಮಧು ನಾಯ್ಕ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.