ತಾಳಮದ್ದಲೆಯಿಂದ ವಿಚಾರವಂತಿಕೆ: ಶ್ರೀ ಹರಿನಾರಾಯಣದಾಸ ಆಸ್ರಣ್ಣ
Update: 2017-07-09 22:50 IST
ಕಟೀಲು, ಜು. 9: ವಾದ ಸಂವಾದಗಳ ತಾಳಮದ್ದಲೆಯ ಕೇಳುವಿಕೆಯಿಂದ ಕರಾವಳಿಯ ಜನ ವಿಚಾರವಂತರಾಗಿದ್ದಾರೆ. ನ್ಯಾಯ ಅನ್ಯಾಯಗಳ ವಿಮರ್ಶೆಗಳ ವಿಚಾರದಲ್ಲೂ ಪ್ರಜ್ಞಾವಂತರಾಗಿದ್ದಾರೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ತಾಳಮದ್ದಲೆ ವಾಟ್ಸಪ್ ಗ್ರೂಪ್‌ನ ಎರಡನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಟೀಲಿನ ವೈದ್ಯ ಡಾ. ಶಶಿಕುಮಾರ್, ಸುಧೀರ್ ಕುಮಾರ್ ಕೊಡೆತ್ತೂರುಗುತ್ತು ಮತ್ತಿತರರಿದ್ದರು.
ವಾಟ್ಸಪ್ ಗ್ರೂಪಿನ ಶಾಂತಾರಾಮ ಕುಡ್ವ ಸ್ವಾಗತಿಸಿದರು. ಸುನಿಲ್ ಕುಮಾರ್ ವಂದಿಸಿದರು. ಗಾಳಿಮನೆ ವಿನಾಯಕ ಭಟ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನ ಹಾಸ್ಯ, ತಾಳಮದ್ದಲೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.