ಸೂಚನೆ ದುರುಪಯೋಗವಾಗದಿರಲಿ: ಎಸ್.ಡಿ.ಪಿ.ಐ.
ಮಂಗಳೂರು, ಜು.9: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರಕ್ಷಣೆಯ ಜವಾಬ್ದಾರಿ ಹೊತ್ತ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಪತ್ರಿಕಾಗೋಷ್ಠಿಯಲ್ಲಿಂದು ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಗೆ ನಿಲ್ಲಿಸದೆ ಪರಾರಿಯಾದರೆ ಗುಂಡಿಕ್ಕಿ ಎಂಬ ಸೂಚನೆ ಪೊಲೀಸರಿಗೆ ನೀಡಿರುತ್ತಾರೆ.
ಆದರೆ ಐಜಿಪಿಯವರ ಈ ಸೂಚನೆಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ಯಾಕೆಂದರೆ ಇತ್ತೀಚೆಗೆ ಹೊರಬಂದ ಕೋಬ್ರಾಪೋಸ್ಟ್ ಕುಟುಕು ಕಾರ್ಯಾಚರಣೆಯಲ್ಲಿ ಬಿಜೆಪಿ ನಾಯಕರ ಹೇಳಿಕೆಯು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಶೇಕಡಾ 60% ಕ್ಕಿಂತಲೂ ಹೆಚ್ಚು ಸಂಘಪರಿವಾರದ ಹಿನ್ನೆ ಲೆಯುಳ್ಳವರು ಎಂದಿದ್ದರು. ಈ ಹೇಳಿಕೆಯನ್ನು ಅವಲೋಕಿಸುವಾಗ ಐಜಿಪಿಯವರ ಸೂಚನೆಯು ಆತಂಕ ಸೃಷ್ಟಿಸುತ್ತಿದೆ.
ಹಿಂದೆಯು ಹಲವಾರು ಅಲ್ಪಸಂಖ್ಯಾತ ಸಮುದಾಯದ ಅಮಾಯಕ ಯುವಕರು ನಕಲಿ ಎನ್‍ಕೌಂಟರ್ ಗೆ ಬಲಿಯಾಗಿರುವುದರಿಂದ ಈ ರೀತಿಯ ಸೂಚನೆ ದುರುಪಯೋಗವಾಗುವ ಹೆಚ್ಚಿನ ಸಾಧ್ಯತೆಗಳಿವೆ. ಆದುದರಿಂದ ಐಜಿಪಿ ಯವರು ಪೊಲೀಸರಿಗೆ ಕೊಟ್ಟಂತಹ ಗುಂಡಿಕ್ಕಿವ ಸೂಚನೆಯು ದುರುಪಯೋಗ ವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.
ಪೊಲೀಸ್ ಇಲಾಖೆ ಕೈಗೊಂಡಿರುವ ಇತರ ಎಲ್ಲಾ ಕಾನೂನು ಕ್ರಮಗಳನ್ನು ಎಸ್.ಡಿ.ಪಿ.ಐ ಸ್ವಾಗತಿಸುತ್ತದೆ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.