ಸಿ.ಪಿ. ಹಲವು ಭಾಷೆಗಳ ಹಿಡಿತವಿದ್ದ ಉತ್ತಮ ವಾಗ್ಮಿ: ಕಾವು ಹೇಮನಾಥ ಶೆಟ್ಟಿ
ಪುತ್ತೂರು, ಜು. 10: ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದ ಸಿ.ಪಿ. ಜಯರಾಮ ಗೌಡರು ಹಲವು ಭಾಷೆಗಳ ಹಿಡಿತವಿದ್ದ ಅವರು ಓರ್ವ ಉತ್ತಮ ವಾಗ್ಮಿಯಾಗಿದ್ದರು. ಅವರ ಹೋರಾಟ, ಸಾಮಾಜಿಕ, ಶೈಕ್ಷಣಿಕ ಚಿಂತನೆಗಳು ಸಂಸತ್ತಿನಲ್ಲಿಯೂ ಮಾತನಾಡಬಲ್ಲ ಅರ್ಹತೆಯನ್ನು ನೀಡಿದ್ದಲ್ಲದೆ ಓರ್ವ ಧೀಮಂತ ನಾಯಕನೆನಿಸಿಕೊಂಡಿದ್ದರು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಸೋಮವಾರ ಪುತ್ತೂರಿನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಸಿ.ಪಿ. ಜಯರಾಮ ಗೌಡರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಿಪಿ ಅವರು ಕೇವಲ ಗೌಡ ಸಮಾಜ ಮಾತ್ರವಲ್ಲದೇ ಎಲ್ಲಾ ಸಮಾಜಗಳಿಂದಲೂ ಗೌರವಕ್ಕೆ ಒಳಪಟ್ಟ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ರಾಜ್ಯ ಅರಣ್ಯ ಸಚಿನ ರಮಾನಾಥ ರೈ, ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸಿ.ಪಿ.ಯವರ ಪತ್ನಿ ಚಂದ್ರಕಲಾ ಜಯರಾಮ ಗೌಡ, ಅಳಿಯ ಪ್ರದೀಪ್, ಉದ್ಯಮಿ ಬಲರಾಮ ಆಚಾರ್ಯ, ಡಾ. ಯು.ಪಿ. ಶಿವಾನಂದ, ಚಂದ್ರಹಾಸ ರೈ, ಎಂ.ಎಸ್. ಮಹಮ್ಮದ್, ವೇದನಾಥ ಸುವರ್ಣ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ವಿಜಯಕುಮಾರ್ ಸೊರಕೆ, ಕೌಶಲ್ ಪ್ರಸಾದ್, ಯು.ಪಿ.ರಾಮಕೃಷ್ಣ, ನ್ಯಾಯವಾದಿ ವೆಂಕಪ್ಪ ಗೌಡ, ಲಕ್ಷ್ಮಣ ಗೌಡ ಕುಂಟಿಕಾನ, ಪಿ.ಸಿ.ಜಯರಾಮ್ ಸುಳ್ಯ, ಕಡಮಜಲು ಸುಭಾಶ್ ರೈ, ಕಿಟ್ಟಣ್ಣ ಗೌಡ ಬಪ್ಪಳಿಗೆ, ನಿತ್ಯಾನಂದ ಮುಂಡೋಡಿ, ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಮಾಜಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಮತ್ತಿತರ ಗಣ್ಯರು ಸೇರಿದಂತೆ ಸಿ.ಪಿ. ಜಯರಾಮ ಗೌಡರ ಅಭಿಮಾನಿ ಹಾಗೂ ಬಂಧು ವರ್ಗದವರು ಉಪಸ್ಥಿತರಿದ್ದರು.
ಸಿ.ಪಿ. ಜಯರಾಮ ಗೌಡರ ಪುತ್ರಿ ವಚನಾ ಪ್ರದೀಪ್, ಸಹೋದರ ಬಿ.ಜಿ. ಸುರೇಶ್ ನುಡಿನಮನ ಸಲ್ಲಿಸಿದರು. ಸಿ.ಪಿ. ಜಯರಾಮ ಗೌಡರ ಸೊಸೆ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.