×
Ad

ಸಮಾಜ ಸೇವೆ ಪುಣ್ಯದ ಕಾರ್ಯ- ಡಾ. ಸಂದೀಪ ಅಣ್ವೇಕರ್

Update: 2017-07-10 19:03 IST

ಭಟ್ಕಳ, ಜು.10: ನಾವು ಬದುಕುವ ಸಮಾಜದಲ್ಲಿ ನೊಂದವರಿಗೆ, ಅಸಹಾಯಕರಿಗೆ ಸಹಾಯ ಮಾಡುವುದು ಪುಣ್ಯದ ಕೆಲಸವಾಗಿದೆ. 100 ವರ್ಷ ಪೂರೈಸಿರುವ ಲಯನ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯು ಜಗತ್ತಿನ ದೊಡ್ಡ ಸೇವಾ ಸಂಸ್ಥೆಯಾಗಿದೆ. ಕಳೆದ 10 ವರ್ಷಗಳಿಂದ ಮುರ್ಡೇಶ್ವರದ ಲಯನ್ಸ್ ಕ್ಲಬ್ ಸೇವಾ ಕಾರ್ಯದಿಂದ ಹೆಸರು ಗಳಿಸಿದೆಯೆಂದು ಲಯನ್ಸ್ ಡಾ. ಸಂದೀಪ್ ಅಣ್ವೇಕರ್ ಕಾರವಾರ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶಿರಾಲಿಯ ಸಮಾಜ ಸೇವಕ ಡಿ.ಜೆ ಕಾಮತ ಮಾತನಾಡಿ ಗಳಿಕೆಯ ಸ್ಚಲ್ಪ ಹಣವನ್ನು ಸಮಾಜಸೇವೆಗೆ ಮೀಸಲಿರಿಸಿದರೆ ಮನಸ್ಸಿಗೆ ನೆಮ್ಮದಿ ಎನಿಸುತ್ತದೆ, ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದುರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಪೇಕ್ಷಾ ಮುರ್ಡೇಶ್ವರ, ಪೂರ್ವಿ ಎಂ ನಾಯ್ಕ, ಪಿ.ಯು.ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಸಹನಾ ನಾಯ್ಕ, ರೇಷ್ಮಾ ಆಚಾರಿ, ಮರಿಯಮ್ ಹನೀಫ್‌ರನ್ನು ಹಾಗೂ ಸಮಾಜ ಸೇವಕರಾದ ಎಸ್.ಎಸ್ ಕಾಮತರನ್ನು ಸನ್ಮಾನಿಸಲಾಯಿತು.

ನೂತನ ಅಧ್ಯಕ್ಷ ಮಂಜುನಾಥ ನಾಯ್ಕ ಮತ್ತು ಕಾರ್ಯದರ್ಶಿ ಫಿಲಿಫ್ ಅಲ್ಮೇಡಾ ಮಾತನಾಡಿದರು. ಖಜಾಂಚಿಯಾಗಿ ಶಿವಾನಂದ ದೈಮನೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಡಾ.ವಾದಿರಾಜ ಭಟ್‌ರವರು ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ನಾಯ್ಕ ವರದಿ ವಾಚಿಸಿದರು. ಖಜಾಂಚಿ ಮೋಹನ ನಾಯ್ಕ ವೇದಿಕೆಯ ಮೇಲಿದ್ದರು. ಶಿವಾನಂದ ದೈಮನೆ ಪ್ರಾರ್ಥಿಸಿದರು. ಲಯನ್ ಸದಸ್ಯ ಎಮ್.ವಿ ಹೆಗಡೆ ಹಾಗೂ ಕೃಷ್ಣ ಹೆಗಡೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News