ಕೋಳಿ ಅಂಕಕ್ಕೆ ಪೊಲೀಸರ ದಾಳಿ: 6 ಮಂದಿ ಸೆರೆ; 6 ಕೋಳಿ ಸಹಿತ ನಗದು ವಶ

Update: 2017-07-10 15:29 GMT

ಮಂಜೇಶ್ವರ: ಪೈವಳಿಕೆ ಸಮೀಪದ ಕೊಮ್ಮಂಗಳ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಸೆರೆ ಹಿಡಿದು, 6 ಕೋಳಿ ಹಾಗೂ 32,940 ರೂ. ವಶಪಡಿಸಿದ್ದಾರೆ.

ಕೊಡ್ಲಮೊಗರುವಿನ ಕೃಷ್ಣ (37), ಪೈವಳಿಕೆ ಸಂತೋಷ್ (26), ಬಾಯಿಕಟ್ಟೆಯ ಮಾಧವ (48), ಸೋಂಕಾಲಿನ ರವೀಂದ್ರ (37), ಎಣ್ಮಕಜೆಯ ಸದಾಶಿವ (30), ಪಳ್ಳತ್ತಡ್ಕದ ಕೃಷ್ಣ ಪಿ. (40) ಎಂಬವರನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಂಜೇಶ್ವರ ಎಸ್.ಐ. ಅನೂಪ್ ಕುಮಾರ್ ನೇತೃತ್ವದ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ಹಲವರು ತಮ್ಮ ವಾಹನಗಳಲ್ಲಿ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಶಪಡಿಸಿದ ಕೋಳಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದಾಳಿಗೆ ಪೊಲೀಸರಾದ ಪ್ರಮೋದ್, ಅನಿಲ್, ಸುರೇಂದ್ರನ್ ನೇತೃತ್ವ ನೀಡಿದರು.
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News