ಸತ್ಯಜಿತ್ ಸುರತ್ಕಲ್ ಮನೆಗೆ ಪೊಲೀಸ್ ದಾಳಿ
ಮಂಗಳೂರು, ಜು.10: ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಹಾಗೂ ಪ್ರದೀಪ್ ಅವರ ಪಂಪ್‌ವೆಲ್ ಮನೆಗೆ ಬಂಟ್ವಾಳ ಪೊಲೀಸರು ಸೋಮವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಮೃತಟ್ಟಿರುವ ಆರೆಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಮೃತದೇಹವನ್ನು ನಗರದಿಂದ ಬಿ.ಸಿ.ರೋಡ್‌ಗೆ ಒಯ್ಯಲು ಸತ್ಯಜಿತ್ ಸುರತ್ಕಲ್ ಮೆರವಣಿಗೆಯನ್ನು ಸಂಯೋಜಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಇಂದು ಬೆಳಗ್ಗಿನ ಜಾವ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ದಾಳಿಯ ಸಂದರ್ಭದಲ್ಲಿ ಸತ್ಯಜಿತ್ ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
ಪೊಲೀಸರು ರಾತ್ರಿ ಸುಮಾರು 2 ಗಂಟೆಯ ಹೊತ್ತಿಗೆ ಮನೆಯ ಬಾಗಿಲು ಬಿಡಿದಿದ್ದು, ಈ ಸಂದರ್ಭದಲ್ಲಿ ನಾನು ಮತ್ತು ನನ್ನ ಇಬ್ಬರು ಮಕ್ಕಳ ಸಹಿತ ಕುಟುಂಬದ ಇತರ ಸದಸ್ಯರು ಮಾತ್ರ ಇದ್ದೆವೆಂದು ಸತ್ಯಜಿತ್ ಅವರ ಪತ್ನಿ ಸವಿತಾ ಸತ್ಯಜಿತ್ ತಿಳಿಸಿದ್ದಾರೆ.