×
Ad

ಚೇತರಿಸುತ್ತಿರುವ ಚಿರಂಜೀವಿಯನ್ನು ಭೇಟಿ ಮಾಡಿದ ಜೆಡಿಎಸ್ ನಿಯೋಗ

Update: 2017-07-10 21:51 IST

ಉಳ್ಳಾಲ, ಜು.10: ಕುತ್ತಾರು ರಾಣಿಪುರ ರಸ್ತೆಯಲ್ಲಿ ದುಷ್ಕರ್ಮಿಗಳಿಂದ ಕೊಲೆಯತ್ನಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ಚಿರಂಜೀವಿ ಅವರನ್ನು ಸೋಮವಾರ ಜೆಡಿಎಸ್ ನಿಯೋಗ ಆಸ್ಪತ್ರೆಯಲ್ಲಿ ಭೇಟಿಯಾಗಿ ದೈರ್ಯ ತುಂಬಿದರು.

ಜೆಡಿಎಸ್ ಮಂಗಳೂರು ಕ್ಷೇತ್ರಾಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು ನೇತೃತ್ವದ ನಿಯೋಗ ಘಟನೆ ಬಗ್ಗೆ ಮಾಹಿತಿ ಪಡೆದಿದೆ. ಈ ಸಂದರ್ಭ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಕೋಮು ಸೌಹಾರ್ದ ಕದಡುತ್ತಿದ್ದು,
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಉರಿಯುವ ಬೆಂಕಿ ನಂದಿಸುವ ಬದಲು ತುಪ್ಪ ಸುರಿದು ಲಾಭ ಪಡೆಯುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.

ಈ ಸಂದರ್ಭ ಮುಖಂಡರಾದ ಮಹಮ್ಮದ್ ಶಾಲಿ ಹರೇಕಳ, ಅಝೀಝ್ ಮಲಾರ್, ಅಕ್ಬರ್ ಅಲಿ ಹರೇಕಳ, ಸಲೀಂ ಅಂಬ್ಲಮೊಗರು, ಅಶೋಕ್ ಶೆಟ್ಟಿ ದೇರಳಕಟ್ಟೆ, ರಝಾಕ್ ಅಂಬ್ಲಮೊಗರು, ಅಬ್ಬಾಸ್ ಅಂಬ್ಲಮೊಗರು, ಹೈದರ್ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News