ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ
ಮೂಡುಬಿದಿರೆ, ಜು.10: ಪುತ್ತಿಗೆ ಪದವಿನ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಅನ್ನು ಉದ್ಘಾಟಿಸಲಾಯಿತು. ಆಳ್ವಾಸ್ ಪದವಿ ಕಾಲೇಜಿನ ಕಲಾವಿಭಾಗದ ಡೀನ್ ಸಂದ್ಯಾ ಕೆ. ಎಸ್. ವಿದ್ಯಾರ್ಥಿ ಸಂಸತ್ತಿಗೆ ಚಾಲನೆ ನೀಡಿ, ಭಾರತ ದೇಶವು ಭವ್ಯಷ್ಯಕ್ಕೆ ಸಮರ್ಥ ನಾಯಕನನ್ನು ಬಯಸುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕೆಂದು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕ ವಸಂತ್ ಕುಮಾರ್ ನಿಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ನಿರ್ಭಯ, ನಿಷ್ಠಾವಂತ, ವಿಭಿನ್ನ ನಾಯಕರಾಗಿ ಬೆಳೆಯಬೇಕೆಂಬ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಸಂಸತ್ತಿನ ಸಂಘಟಕಿ ಲಕ್ಷ್ಮೀ ಶೇರಿಗಾರ್ ಉಪಸ್ಥಿತರಿದ್ದರು. 2017-18ರ ಸಾಲಿನ ವಿದ್ಯಾರ್ಥಿ ಸಂಸತ್ತಿನ ನಾಯಕಿಯಾಗಿ ಸಂತೃಪ್ತಿ ಸಿ. ಎಸ್., ಉಪ ನಾಯಕಿಯಾಗಿ ಮನಿಷಾ ಎಸ್. ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಗಾಯತ್ರಿ ಸ್ವಾಗತಿಸಿದರು. ಶ್ರೀಯಾ ಪೈ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಸುಜ್ಞಾನ್ ಆರ್. ಶೆಟ್ಟಿ ದಿಕ್ಸೂಚಿ ಭಾಷಣವನ್ನು ವಾಚಿಸಿದನು. ಸಾರಾ ಹುದಾ ವಂದಿಸಿದರು.