×
Ad

ಆಳ್ವಾಸ್‌ನಲ್ಲಿ ಓರಿಯೆಂಟೇಶನ್ ಕಾರ್ಯಕ್ರಮ

Update: 2017-07-10 21:57 IST

ಮೂಡುಬಿದಿರೆ, ಜು.10: ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಒರಿಯೆಂಟೇಶನ್ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.

ಜೆಸಿಐ ರಾಷ್ಟ್ರೀಯ ತರಬೇತುದಾರ ಧೀರೇಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪರಸ್ಪರ ಸಂವಹನದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಮರು ಅಲೋಚನೆ ಮತ್ತು ಅವರವರ ವಿಚಾರಗಳನ್ನು ಹಂಚಿಕೊಳ್ಳಬೇಕು. ಇದು ಅವರ ಮುಂದಿನ ಭವಿಷ್ಯದಲ್ಲಿ ಶೈಕ್ಷಣಿಕವಾಗಿ ಹಾಗೂ ಸಹಪಠ್ಯಯೇತರ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಲಾವಿಭಾಗದ ಡೀನ್ ಸಂಧ್ಯಾರವರು ಮಾನವಿಕ ವಿಭಾಗದ ಚಟುವಟಿಕೆಗಳ ಕುರಿತಾದ ವಿವರಗಳನ್ನು ನೀಡಿದರು. ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿ ಮಾರ್ಗದರ್ಶಕ, ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಸನ್ಮತಿ ಕುಮಾರ್, ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ದೀಪಾ ಕೊಠಾರಿ, ಸಮಾಜ ಕಾರ್ಯವಿಭಾಗದ ಉಪನ್ಯಾಸಕಿ ಸಪ್ನಾ ಉಪಸ್ಥಿತರಿದ್ದರು. ಆಳ್ವಾಸ್‌ನ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿ, ಪ್ರಸ್ತುತ ಆಳ್ವಾಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ದೀವಿತ್ ಹಾಗೂ ಶ್ರೀಗೌರಿ, ತಮ್ಮ ಕಾಲೇಜು ಜೀವನದ ಅನುಭವ ಹಂಚಿಕೊಂಡರು. ವಿದ್ಯಾರ್ಥಿ ರಝಿಯಾ ಸ್ವಾಗತಿಸಿದರು. ರಾಹುಲ್ ನಿರೂಪಿಸಿದರು. ಅದಿತಿ ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News