‘ಬರ್ಗರ್ ಲಾಂಜ್’ ಆಹಾರ ಮಳಿಗೆ ಉದ್ಘಾಟನೆ
ಮಂಗಳೂರು, ಜು. 10: ನಗರದ ಕೊಂಡಿಯಾಲ್‌ಬೈಲ್ ಕೆನರಾ ಕಾಲೇಜು ರಸ್ತೆಯಲ್ಲಿರುವ ದಿವ್ಯ ಎನ್‌ಕ್ಲೇವ್ ಅಪಾರ್ಟ್‌ಮೆಂಟ್‌ನ ತಳ ಅಂತಸ್ತಿನಲ್ಲಿ ನೂತನವಾಗಿ ಆರಂಭಿಸಲಾಗಿರುವ ಆಹಾರ ಮಳಿಗೆ ಬರ್ಗರ್ ಲಾಂಜ್’ ಸೋಮವಾರ ಉದ್ಘಾಟನೆಗೊಂಡಿತು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ‘ಬರ್ಗರ್ ಲಾಂಜ್’ನ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮನಪಾ ಮೇಯರ್ ಕವಿತಾ ಸನಿಲ್, ಮನಪಾ ಸ್ಥಾಯೀ ಸಮಿತಿಯ ಅಧ್ಯಕ್ಷ ಅಬ್ದುಲ್ ರವೂಫ್, ಮನಪಾ ಸದಸ್ಯ ಸುಧೀರ್ ಶೆಟ್ಟಿ, ಕೋಮಲ್ ಸ್ವೀಟ್ಸ್‌ನ ಗಣೇಶ್ ನಾಗವೇಕರ್, ಕಣ್ಣೂರು ಎಜುಕೇಶನಲ್ ಚಾರಿಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಿತಾರ್, ಮೈಸೂರು ಯೂತ್ ಕಾಂಗ್ರೆಸ್‌ನ ಶುಐಬ್, ಅನಿವಾಸಿ ಉದ್ಯಮಿ ಮೂಸಾ ತಲಪಾಡಿ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಹಾಜಿ ಕೆ.ಪಿ.ಅಹ್ಮದ್, ಅಬ್ದುಲ್ಲತೀಫ್, ಟಿಪ್‌ಟಾಪ್ ಸಾಗರ್‌ನ ಬಶೀರ್, ಮುಹಮ್ಮದ್ ಇಕ್ಬಾಲ್ ಹಾಗೂ ‘ಬರ್ಗರ್ ಲಾಂಜ್’ನ ಪಾಲುದಾರರಾದ ಅಬ್ದುಲ್ ವಾಹಿದ್, ಶಂಶೀರ್ ಮತ್ತು ಶುಹೇಬ್ ಉಪಸ್ಥಿತರಿದ್ದರು.
ಬರ್ಗರ್ ಎಲ್ಲರ ಕೈಗೆಟಕುವಂತಾಗಲಿ: ಸಚಿವ ಯು.ಟಿ.ಖಾದರ್ ಮಾತನಾಡಿ, ಬರ್ಗರ್‌ನ್ನು ಕೇವಲ ಶ್ರೀಮಂತರೇ ತಿನ್ನುವಂತಾಗಬಾರದು. ಇದರ ಸವಿಯನ್ನು ಬಡವರು ಕೂಡ ಸವಿಯಲು ಅವರ ಕೈಗೆಟಕುವಂತೆ ಬರ್ಗರ್‌ನ ದರವನ್ನು ನಿಗದಿ ಮಾಡಬೇಕು. ಮಳಿಗೆಯ ಮಾಲಕರು ಅಧಿಕ ಲಾಭ ಗಳಿಸುವ ಒಂದೇ ಉದ್ದೇಶವನ್ನಿಟ್ಟುಕೊಳ್ಳದೆ ಕನಿಷ್ಠ ದರ ವಿಧಿಸಿ ಹೆಚ್ಚು ಗ್ರಾಹಕರನ್ನು ಆಕರ್ಷಿಸುವಂತೆ ಸಲಹೆ ನೀಡಿದರು.
ಗುಣಮಟ್ಟದೊಂದಿಗೆ ಶುಚಿತ್ವ ಇರಲಿ: ಮೇಯರ್ ಕವಿತಾ ಸನಿಲ್ ಮಾತನಾಡಿ, ‘ಬರ್ಗರ್ ಲಾಂಜ್’ನವರು ಗ್ರಾಹಕರಿಗೆ ಗುಣಮಟ್ಟದ ಬರ್ಗರ್‌ನ್ನು ಪೂರೈಸುವಾಗ ಶುಚಿತ್ವವನ್ನೂ ಕಾಪಾಡುವಂತೆ ಸಲಹೆ ನೀಡಿದರು.
ಅಬ್ದುಲ್ ಮಜೀದ್ ಸಿತಾರ್ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಮತ್ತು ಮುಹಮ್ಮದ್ ಸ್ವರೂಪ್ ಕಾರ್ಯಕ್ರಮ ನಿರೂಪಿಸಿದರು.