×
Ad

ಕಲ್ಲಬೆಟ್ಟು: ನೀಟ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪ.ಪೂ.ಕಾಲೇಜು ಉತ್ತಮ ಸಾಧನೆ

Update: 2017-07-10 22:17 IST

ಮೂಡುಬಿದಿರೆ, ಜು. 10: ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ರಾಜ್ಯ ರ್ಯಾಂಕಿಗ್ ಪಟ್ಟಿಯಲ್ಲಿ ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಧೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸುದರ್ಶನ್‌ ಬಿ.ಇ (185)ನೇ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಇದಲ್ಲದೆ ಚಿದ್ವಿಲಾಸ್ (420), ಹರಿಣಿ ಬಿ.ಕೆ (560) ನೇ ರ್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.

NATA ಪರೀಕ್ಷೆಯಲ್ಲಿ ಅಶುತೋಶ್.ಜಿ.ಶಾನ್‌ಬೋಗ್-(199),  ಕ್ಷಮಿತಾ ಜೈನ್ .ವಿ (209), ಅಶೀಶ್ ಯಮ್ ಗೌಡ-386 ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಕ್ಕೆ 9 ರ್ಯಾಂಕ್ ಪಡೆದ ಪ್ರತೀಕ್ ಗಣೇಶ್ ಹೆಗ್ಡೆ (588/600) C.E.T ಹಾಗೂ JEE ADVANCEಗೆ ಅರ್ಹತೆ ಪಡೆದ ಕೃಷ್ಣಕುಮಾರ್ ಪಂಡಿತ್(138), ಪಶು ವೈದ್ಯ ವಿಭಾಗದಲ್ಲಿ ಸುದರ್ಶನ ಬಿ.ಇ (53) ಮತ್ತು   MBBS  ರಾಷ್ಟಮಟ್ಟದ ಪ್ರವೇಶ ಪರೀಕ್ಷೆಯಲ್ಲಿ (NEET) ಅರ್ಹತೆ ಪಡೆದ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಾಧನೆಗೆ ಕಾರಣವಾದ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರುಗಳನ್ನು ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News