×
Ad

ಸಿ.ಎಂ ನಡೆ ಸ್ವಾಗತಾರ್ಹ: ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಮೌಲಾನಾ ಅನೀಸ್ ಕೌಸರಿ

Update: 2017-07-10 23:13 IST

ಮಂಗಳೂರು, ಜ.10: ಶಾಂತಿಪ್ರೀಯ ದ.ಕ ಜಿಲ್ಲೆಯಾಧ್ಯಂತ ಇತ್ತೀಚೆಗೆ ನಡೆಯುತ್ತಿರುವ ಕೋಮು ಪ್ರಚೋದಿತ ಅಹಿತಕರ ಘಟನೆಗಳಿಗೆ ಮತೀಯ ಕೋಮುವಾದಿಗಳು ನೇರ ಕಾರಣವಾಗಿದ್ದು, ಗಲಭೆಗಳು ಜನರ ನೆಮ್ಮದಿ ಕೆಡಿಸಿವೆ ಮತ್ತು ಭಯ ಭೀತರನ್ನಾಗಿಸಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ ತಿಳಿಸಿದ್ದಾರೆ.

ನಿರ್ದಿಷ್ಟ ದುರುದ್ದೇಶವನ್ನಿಟ್ಟುಕೊಂಡು ಪೂರ್ವ ಯೋಜಿತವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ನಿಯಂತ್ರಿಸಬೇಕಾದ ಜನ ಪ್ರತಿನಿಧಿಗಳೇ ಕಾನೂನಿನೊಂದಿಗೆ ಚಿಲ್ಲಾಟವಾಡುತ್ತಿರುವುದು ಖೇದಕರ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಚೋಧನಾತ್ಮಕ ಬರಹಗಳೂ ಕೂಡ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದು, ಮುಗ್ದರನ್ನು ಕೆರಳಿಸುವಂತಿದೆ ಎಂದರು

ಈ ನಿಟ್ಟಿನಲ್ಲಿ ತಡವಾಗಿಯಾದರೂ ಮಾನ್ಯ ಸಿ.ಎಂ. ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದು ಜಿಲ್ಲೆಯ ಜನತೆಗೆ ಭರವಸೆ ಮೂಡಿಸಿದೆ. ಮುಖ್ಯಮಂತ್ರಿಯ ನಡೆಯನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಮತೀಯ ಕೋಮುವಾದಿಗಳು ಯಾರಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಗಲಭೆಗೆ ಕುಮ್ಮಕ್ಕು ನೀಡುವವರನ್ನು ಬಂಧಿಸಿ ಕ್ರಮ ಕೈಗೊಂಡರೆ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ಅನೀಸ್ ಕೌಸರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News