ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ
Update: 2017-07-10 23:16 IST
ಭಟ್ಕಳ, ಜು. 10: ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಗ್ರೀನ್ ಡೇ ಎಂಬ ದಿನದೊಂದಿಗೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವನಮಹೋತ್ಸವದ ಕುರಿತು ಮಾತನಾಡಿದ ಸಚಿನ್ ಹಳದಿಪುರ ಪರಿಸರ ನಮಗೆ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕಿ ಪುಷ್ಪಲತಾ ಎಂ.ಎಸ್., ಸಹ-ಸಂಯೋಜಕ ಕೃಷ್ಣಮೂರ್ತಿ ಶೆಟ್ಟಿ, ಪ್ರಾಂಶುಪಾಲರುಗಳಾದ ಕೆ. ಜಿ. ಹೆಗಡೆ, ನಯೀಮ್ ಘೋರಿ, ಚಂದ್ರೇಶ್ವರ ಆಚಾರ್ಯ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರೀನ್ ಡೇ ಅಂಗವಾಗಿ ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿಗಳು ಹಸಿರು ವಸ್ತ್ರವನ್ನು ಧರಿಸಿಕೊಂಡು ಬಂದು ಗಿಡಗಳನ್ನು ನೆಡುವ ಮೂಲಕ ಅತ್ಯಂತ ಸುಂದರವಾಗಿ ಹಾಗೂ ವಿಶಿಷ್ಟವಾಗಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.