ಆಸ್ಪತ್ರೆಗೆ ಸಚಿವ ಖಾದರ್ ಭೇಟಿ
Update: 2017-07-10 23:39 IST
ಮಂಗಳೂರು, ಜು. 10: ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಸೋಮವಾರ ಭೇಟಿ ಮಾಡಿದರು.
ಕುತ್ತಾರ್‌ನ ರಾಣಿಪುರದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿರುವ ಚಿರಂಜೀವಿ ಅವರು ದಾಖಲಾಗಿರುವ ದೇರಳಕಟ್ಟೆ ಆಸ್ಪತ್ರೆ, ಹೈಲ್ಯಾಂಡ್‌ನಲ್ಲಿ ದಾಖಲಾಗಿರುವ ರಿಯಾಝ್ ಮತ್ತು ಮುಹಮ್ಮದ್ ಸಾಜಿದ್ ಅವರನ್ನು ಭೇಟಿ ಮಾಡಿದರು.