'ಏಸ್ ಫೌಂಡೇಶನ್' ವತಿಯಿಂದ 'ನಾಗರಿಕಾ ಸೇವಾ ಪರೀಕ್ಷೆ'ಗಳ ಬಗ್ಗೆ ಮಾರ್ಗದರ್ಶನ ಶಿಬಿರ
ಮಂಗಳೂರು, ಜು. 11: ಕರಾವಳಿಯ ವಿದ್ಯಾರ್ಥಿಗಳು ಮತ್ತು ಯುವ ಜನತೆಯು ನಾಗರಿಕಾ ಸೇವಾ ಕ್ಷೇತ್ರ ಮತ್ತು ಸರಕಾರಿ ಉದ್ಯೋಗಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ ಮತ್ತು ಈ ನಿಟ್ಟಿನಲ್ಲಿ ನಗರದಲ್ಲಿ ಇದೀಗ ಲಭ್ಯವಿರುವ ತರಬೇತಿ ಅಕಾಡಮಿಗಳ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳವಂತೆ ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಬ್ಯಾರಿ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಅವರು ನಗರದ 'ಏಸ್ ಫೌಂಡೇಶನ್' ಏರ್ಪಡಿಸಿದ ನಾಗರಿಕ ಸೇವಾ ಪರೀಕ್ಷೆ ಬಗೆಗಿನ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಿರೆ-ಏಸ್ ಸಿವಿಲ್ ಸರ್ವಿಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಪಿ.ಡಿ.ಒ. ಪರೀಕ್ಷೆಯಲ್ಲಿ ತೇರ್ಗಡೆಯಾದ ಮುಹಮ್ಮದ್ ರಿಯಾಝ್ ಕಡಬ ಅವರನ್ನು ಮುಖ್ಯ ಅತಿಥಿ ಅಖ್ತರ್ ಶೇಖ್ ಉಡುಗೊರೆ ನೀಡಿ ಸನ್ಮಾನಿಸಿದರು.
ಆನ್ ಅಕಾಡಮಿ ಬೆಂಗಳೂರು ಇದರ ಶಾಹಿದ್ ಹಾಶ್ಮಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಎಸ್. ಅಮೀನ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಸಾದುದ್ದೀನ್ ಸಾಲೀಹ್ ಮಾತನಾಡುತ್ತ ಸಂಸ್ಥೆಯು ಯು.ಪಿ.ಎಸ್.ಸಿ. ತರಬೇತಿಯನ್ನು ಮುಂದಿನ ತಿಂಗಳಲ್ಲಿ ಪ್ರಾರಂಭಿಸಲಿದ್ದು, ಈ ತಿಂಗಳ ಕೊನೆಗೆ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ದಾಖಲಾತಿಯನ್ನು ನೀಡಲಿದೆ. ಆಸಕ್ತರು ಸಂಸ್ಥೆಯ ಪ್ರವೇಶ ಪರೀಕ್ಷೆ ಬರೆದು ಈ ಅವಕಾಶವನ್ನು ಸದುಪಯೋಗಿಸಲು ಕರೆ ನೀಡಲಾಗಿದೆ.
ಸಂಸ್ಥೆಯ ನಿರ್ದೇಶಕ ನಝೀರ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿ, ಇಮ್ತಿಯಾಝ್ ಖತೀಬ್ ವಂದಿಸಿದರು.