×
Ad

ವಿದ್ಯಾರ್ಥಿಗಳ ಇಹ-ಪರ ವಿಜಯದಲ್ಲಿ ಶಿಕ್ಷಕರ ಪಾತ್ರ ಮಹತ್ತರ: ಆದಂ ದಾರಿಮಿ

Update: 2017-07-11 18:01 IST

ವಿಟ್ಲ, ಜು.11: ವಿದ್ಯಾರ್ಥಿಗಳ ಇಹ-ಪರ ವಿಜಯದಲ್ಲಿ ಮದ್ರಸ ಅಧ್ಯಾಪಕರುಗಳ ಪಾತ್ರ ಮಹತ್ತರವಾದುದು ಎಂದು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಹಾಜಿ ಪಿ.ಕೆ. ಆದಂ ದಾರಿಮಿ ಹೇಳಿದರು.

ಇಲ್ಲಿನ ಮಸೀದಿ ಆಡಳಿತ ಸಮಿತಿ ಹಾಗೂ ಕೊಡಾಜೆ ಜಮಾಅತ್ ವ್ಯಾಪ್ತಿಯ ಮದ್ರಸ ಅಧ್ಯಾಪಕರುಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಬದುಕಿ-ಬಾಳುವಂತಹ ಭದ್ರ ಅಡಿಪಾಯವನ್ನು ಹಾಕಿಕೊಡುವಂತಹ ಮಹತ್ತರವಾದ ಜವಾಬ್ದಾರಿಯನ್ನು ಮದ್ರಸ ಅಧ್ಯಾಪಕರುಗಳು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ರಫೀಕ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ಬದ್ರಿಯಾ ಜುಮಾ ಮಸೀದಿ ಇಮಾಂ ಮುಹಮ್ಮದ್ ನವಾಝ್ ದಾರಿಮಿ, ತರ್ಬಿಯತುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಹಮೀದ್ ಮುಸ್ಲಿಯಾರ್, ಸಹ ಶಿಕ್ಷಕರುಗಳಾದ ಮುಹಮ್ಮದ್ ಅಲಿ ಮುಸ್ಲಿಯಾರ್, ಇಸ್ಮಾಯಿಲ್ ಅರ್ಶದಿ, ಅಹಮದ್ ನಿಝಾರ್ ಮೌಲವಿ, ಅಶ್ರಫ್ ಮುಸ್ಲಿಯಾರ್ ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಸೀದಿ ಆಡಳಿತ ಸಮಿತಿ ಹಾಗೂ ಪೋಷಕರ ಸಹಕಾರ ಅತೀ ಅಗತ್ಯ ಎಂದರು.

ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಾದ ಇಬ್ರಾಹಿಂ ಕೆ. ಮಾಣಿ, ಇಬ್ರಾಹಿಂ ಹಾಜಿ ನೆಡ್ಯಾಲು, ಅಶ್ರಫ್ ಹಾಜಿ ಕೊಡಾಜೆ, ಅಬ್ದುಲ್ ಲತೀಫ್ ನೇರಳಕಟ್ಟೆ, ಇಲ್ಯಾಸ್ ನೇರಳಕಟ್ಟೆ, ಹಬೀಬ್ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News