ಶಾಸಕರ ಅನುದಾನ ಬಿಡುಗಡೆ
Update: 2017-07-11 18:32 IST
ಮಂಗಳೂರು, ಜು.11: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕ ಕೆ. ಅಭಯಚಂದ್ರ ಜೈನ್ ಅವರ 2016-17ನೆ ಸಾಲಿನ ದ್ವಿತೀಯ ಹಂತದ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್‌ನ ಕೇಂದ್ರೀಯ ಮಸೀದಿ ಬಳಿ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗೆ 1.25 ಲಕ್ಷ ರೂ., ಹಳೆಯಂಗಡಿ ಗ್ರಾಪಂನ ಸಸಿಹಿತ್ಲು ಗ್ರಾಮದ ಮುಂಡಾ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ 2 ಲಕ್ಷ ರೂ., ಕಿಲ್ಪಾಡಿ ಗ್ರಾಪಂನ ಎಂ.ಸಿ.ಟಿ. ಮುಲ್ಕಿ ಕಾಂಕ್ರಿಟ್ ಚರಂಡಿ ರಚನೆ ಮುಂದುವರಿದ ಕಾಮಗಾರಿಗೆ 2 ಲಕ್ಷ ರೂ., ತೆಂಕುಮಿಜಾರು ಗ್ರಾ.ಪಂ.ನ ಬಂಗುಬೆಟ್ಟು ಸರಕಾರಿ ಹಿ.ಪ್ರಾ. ಶಾಲೆಯ ಕೊಠಡಿ ದುರಸ್ಥಿ ಕಾಮಗಾರಿಗೆ 1 ಲಕ್ಷ ರೂ., ಕಿಲ್ಪಾಡಿ ಗ್ರಾಪಂನ ಅಂಗಾರಗುಡ್ಡೆ ಭಜನಾ ಮಂದಿರ ರಸ್ತೆ ಡಾಮರೀಕರಣ ಕಾಮಗಾರಿಗೆ 3 ಲಕ್ಷ ರೂ., ಕಿಲ್ಪಾಡಿ ಗ್ರಾಪಂನ ಕಿಲ್ಪಾಡಿ ಗ್ರಾಮದ ಲೋಕೋಪಯೋಗಿ ರಸ್ತೆಯಿಂದ ರೈಲ್ವೆ ಗೇಟಿಗೆ ಹೋಗುವ ರಸ್ತೆ ಡಾಮರೀಕರಣ ಕಾಮಗಾರಿಗೆ 5 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.