ಲೈಬ್ರೇರಿಯನ್ ಸಂಕಪ್ಪರೈಗೆ ಗೌರವ ಡಾಕ್ಟರೇಟ್

Update: 2017-07-11 13:06 GMT

ಮಂಗಳೂರು. ಜು, 11: ನಗರದ ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಲೈಬ್ರೇರಿಯನ್ ಸಂಕಪ್ಪರೈ ಬರೆದು ಮಂಡಿಸಿದ ‘ಕನ್ವರ್ಜನ್ಸ್ ಆಫ್ ಇನ್‌ಫರ್‌ಮೇಷನ್ ಆ್ಯಂಡ್ ಕಮ್ಯುನಿಕೇಷನ್ ಟೆಕ್ನೋಲೋಜಿಸ್ ಆ್ಯಂಡ್ ಇಟ್ಸ್ ಅಪ್ಲಿಕೇಷನ್ ಇನ್ ಇಂಜಿನಿಯರಿಂಗ್ ಕಾಲೇಜ್ ಲೈಬ್ರೇರಿಸ್ : ಎ ಸ್ಟಡಿ ದಿ ರೆಫೆರೆನ್ಸ್ ಟು ದಕ್ಷಿಣ ಕನ್ನಡ ಆ್ಯಂಡ್ ಉಡುಪಿ ಡಿಸ್ಟ್ರಿಕ್ ಆಫ್ ಕರ್ನಾಟಕ, ಇಂಡಿಯಾ’ ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯವು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ನೀಡಿದೆ.

ಮಹಾ ಪ್ರಬಂಧವನ್ನು ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ಮಹೇಶ್ ವಿ. ಮುದೋಳ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿತ್ತು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಎಂ.ಎಲ್.ಐ.ಎಸ್.ಸಿ ಹಾಗು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಸಂಕಪ್ಪ ರೈ ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಬಂಟಕಲ್ಲು ವೆಂಕಪ್ಪರೈ ಮತ್ತು ಶಾರದ ರೈ ದಂಪತಿ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News