×
Ad

ಖ್ಯಾತ ವ್ಯಂಗ್ಯ ಚಿತ್ರಕಾರ ಮಂಗೇಶ ತೆಂಡುಲ್ಕರ್ ನಿಧನ

Update: 2017-07-11 18:58 IST

ಪುಣೆ,ಜು.11: ಖ್ಯಾತ ವ್ಯಂಗ್ಯ ಚಿತ್ರಕಾರ ಹಾಗೂ ಲೇಖಕ ಮಂಗೇಶ ತೆಂಡುಲ್ಕರ್ (82) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಸೋಮವಾರ ರಾತ್ರಿ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ತೆಂಡುಲ್ಕರ ಅವರನ್ನು ರವಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದವು.

ತನ್ನ ಕೊನೆಯ ದಿನಗಳವರೆಗೂ ಕ್ರಿಯಾಶೀಲರಾಗಿದ್ದ ತೆಂಡುಲ್ಕರ್ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನವೊಂದನ್ನು ಕಳೆದ ತಿಂಗಳು ನಗರದಲ್ಲಿ ಆಯೋಜಿಸಲಾಗಿತ್ತು. ಅವರು ಖ್ಯಾತ ನಾಟಕಕಾರ ದಿ.ವಿಜಯ್ ತೆಂಡುಲ್ಕರ್ ಅವರ ಕಿರಿಯ ಸೋದರರಾಗಿ ದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News