ಯುದ್ಧಾಪರಾಧಗಳ ತನಿಖೆಗೆ ಆಯೋಗ ರಚನೆ: ಆ್ಯಮ್ನೆಸ್ಟಿ ಒತ್ತಾಯ

Update: 2017-07-11 13:53 GMT

ಲಂಡನ್, ಜು. 11: ಮೊಸುಲ್ ನಗರವನ್ನು ಐಸಿಸ್‌ನಿಂದ ಮುಕ್ತಗೊಳಿಸುವ ಕಾರ್ಯಾಚರಣೆ ವೇಳೆ ಎರಡೂ ಕಡೆಗಳಿಂದ ನಾಗರಿಕರ ಮೇಲೆ ನಡೆದ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಆಯೋಗವೊಂದನ್ನು ರಚಿಸಬೇಕು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಸೋಮವಾರ ಕರೆ ನೀಡಿದೆ.

‘‘ಮೊಸುಲ್ ನಗರದ ಜನತೆ ಅನುಭವಿಸಿದ ಚಿತ್ರಹಿಂಸೆ ಮತ್ತು ಈ ಸಂಘರ್ಷದಲ್ಲಿ ಒಳಗೊಂಡ ಎಲ್ಲ ಪಕ್ಷಗಳು ಮಾನವ ಜೀವಕ್ಕೆ ತೋರಿದ ಅನಾದರಕ್ಕೆ ತಕ್ಕ ಶಿಕ್ಷೆಯಾಗಬೇಕು’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನಲ್ಲಿ ಮಧ್ಯಪ್ರಾಚ್ಯ ಸಂಶೋಧನಾ ನಿರ್ದೇಶಕಿಯಾಗಿರುವ ಲಿನ್ ಮಾಲೂಫ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News