ಸಂಜಯ್ ಎಸ್. ಸರಳಾಯರಿಗೆ ಪಿಹೆಚ್‌ಡಿ ಪದವಿ
Update: 2017-07-11 20:35 IST
ಬೆಳ್ತಂಗಡಿ, ಜು.11: ಉಜಿರೆ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂಜಯ್ ಎಸ್. ಸರಳಾಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿನೀಡಿದೆ.
ಸ್ಟಡೀಸ್ ಆನ್ ನ್ಯೂ ಅಸ್ಪೆಕ್ಟ್ ಆಫ್ ಕ್ಯೂನಿಯನ್ ಕೆಮೆಸ್ಟ್ರಿ ಸಂಶೋಧನಾ ಅಧ್ಯಯನವನ್ನು ಡಾ. ಶ್ರೀಧರ ಕೆ. ಇವರ ಮಾರ್ಗದರ್ಶನದಲ್ಲಿ ಮಾಡಿದ್ದಾರೆ.
ಇವರು ಬೆಂಗಳೂರಿನ ಫಾರ್ಮಸ್ಯುಟಿಕಲ್ ಕಂಪೆನಿಯಲ್ಲಿ ಹತ್ತು ವರ್ಷಗಳ ಅನುಭವ ಹೊಂದಿದ್ದು, ಎರಡು ಅಂತರಾಷ್ಟ್ರೀಯ ಪೇಟೆಂಟ್‌ನ್ನು ಪಡೆಯಲು ಶ್ರಮಿಸಿದ್ದಾರೆ.
ಜೊತೆಗೆ ಅಂತರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಸಂಶೋಧನಾ ಲೇಖನವನ್ನು ಪ್ರಕಟಿಸಿದ್ದಾರೆ. ಕಳೆದ ಎರಡುವರ್ಷಗಳಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆಯಲ್ಲಿದ್ದಾರೆ.