ಹಿರಿಯ ನಾಗರಿಕರಿಗೆ ಸವಲತ್ತು ವಿತರಣೆಗೆ ಅರ್ಜಿ ಆಹ್ವಾನ
ಉಡುಪಿ, ಜು.11: ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಇಲಾಖೆ ಮೂಲಕ ಹಿರಿಯ ನಾಗರಿಕರಿಗೆ ಅವರ ಅವಶ್ಯಕತೆಗೆ ಅನುಸಾರವಾಗಿ ಕನ್ನಡಕ ಅಡ್ಜಸ್ಟಬಲ್ ವಾಕಿಂಗ್ ಸ್ಟಿಕ್, ಟ್ರೈಪಾಡ್, ಶ್ರವಣಸಾಧನ, ವಾಕರ್ ಕಮೋಡ್ ಮುಂತಾದ ಸಾಧನ ಸಲಕರಣೆ ವಿತರಣೆಗಾಗಿ ಅರ್ಹರಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.
ಸರಕಾರಿ/ಖಾಸಗಿ ವೈದ್ಯರು ಸೂಚಿಸಿರುವ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳಿಗಾಗಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಬಿಪಿಎಲ್ ಪಡಿತರ ಚೀಟಿ, ಆಧಾರ್ ಕಾರ್ಡ್, ಜಿಲ್ಲೆಯಲ್ಲಿ ಕನಿಷ್ಟ 10 ವರ್ಷಗಳಿಂದ ವಾಸವಿರುವ ಬಗ್ಗೆ ಸಂಬಂಧಿತ ಪ್ರಾಧಿಕಾರದಿಂದ ದೃಢೀಕೃತ ಪ್ರಮಾಣಪತ್ರ ಯಾವ ಸಾಧನ ಸಲಕರಣೆ ಅಗತ್ಯವಿದೆ ಎಂಬ ಬಗ್ಗೆ ಸರ್ಕಾರಿ/ಖಾಸಗಿ ವೈದ್ಯರು ನಿಗದಿತ ಅರ್ಜಿ ನಮೂನೆಯಲ್ಲಿ ದೃಢೀಕರಿಸಿದ ಮೂಲ ಅರ್ಹತಾ ಪ್ರಮಾಣಪತ್ರ ಹಾಗೂ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಜು.30ರೊಳಗೆ ಅರ್ಜಿ ಸಲ್ಲಿಸಬಹುದು.
ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯನ್ನು (ದೂರವಾಣಿ ಸಂಖ್ಯೆ: 0820-2574810) ಸಂಪಕಿಸಬಹುದು ಅಥವಾ ಇಲಾಖೆಯ ವೆಬ್‌ಸೈಟ್ -www.welfareofdisabled.kar.nic.in- ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.