ಬಾವಿಗೆ ಹಾರಿ ಆತ್ಮಹತ್ಯೆ
Update: 2017-07-11 20:59 IST
ಉಡುಪಿ, ಜು.11: ಅನಾರೋಗ್ಯದ ಚಿಂತೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಪುತ್ತೂರು ಸಂತೆಕಟ್ಟೆಯ ಸಾಲ್ವದೂರ್ ಕ್ರಾಸ್ವೊ(73) ಎಂಬವರು ಜು.9ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಿರಲಿಲ್ಲ. ಜು.11 ರಂದು ನೆರೆಮನೆಯ ಜೆಸಿಂತಾ ಫೆರ್ನಾಂಡಿಸ್ ಎಂಬವರು ಮೃತರ ಮನೆಯ ಅಂಗಳದಲ್ಲಿರುವ ಬಾವಿಯನ್ನು ಇಣಿಕಿ ನೋಡಿದಾಗ ಅದರಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂತೆನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.