×
Ad

ಮಲೆಂಗಲ್ಲು: ರಿಷಿ ಯಕ್ಷ ವೃಕ್ಷ ಸಂಭ್ರಮ

Update: 2017-07-11 21:05 IST

ಮಂಗಳೂರು, ಜು. 11: ಬೆಳ್ತಂಗಡಿಯ ಕಣಿಯೂರು ಗ್ರಾಮದ ಮಲೆಂಗಲ್ಲುನಲ್ಲಿ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ರಿಷಿ ಯಕ್ಷ ವೃಕ್ಷ ಸಂಭ್ರಮ ನಡೆಯಿತು.

ಯಕ್ಷ ಸಂಭ್ರಮವನ್ನು ಮಲೆಂಗಲ್ಲು ಪ್ರಧಾನ ಅರ್ಚಕ ವಿಜಯ ಕುಮಾರ್ ತಂತ್ರಿ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಕೊಲ್ಲೊಟ್ಟು ವಿಠಲ ಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ರಾಮಣ್ಣ ಮೇಲಾಂಟ ಮುಗರೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್ ಪಡ್ಪು, ದಿಗ್ವಿಜಯ ಚಾನೆಲ್‌ನ ಕ್ರೀಡಾ ವಿಭಾಗದ ಮುಖ್ಯಸ್ಥ ದಾಮೋದರ ದೊಂಡೊಲೆ, ಯಕ್ಷಗಾನ ಕಲಾವಿದ ಪ್ರಶಾಂತ ಶೆಟ್ಟಿ ನೆಲ್ಯಾಡಿ, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪದ್ಮುಂಜ, ಉಪಾಧ್ಯಕ್ಷ ಜಯರಾಮ ಗುಣಾಜೆ, ಕುಂಞ ಮೂಲ್ಯ, ಆನಂದ ಪದ್ಮುಂಜ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಹಿರಿಯ ಭಾಗವತ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ವೈಭವ ಮತ್ತು ತಾಳಮದ್ದಳೆ ನಡೆಯಿತು. ಮಲೆಂಗಲ್ಲು ಪರಿಸರದಲ್ಲಿ ಗಿಡ ನೆಡಲಾಯಿತು. ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ಪದ್ಮುಂಜ ಸ್ವಾಗತಿಸಿ, ವಂದಿಸಿದರು. ಶಿಕ್ಷಕ ಸದಾಶಿವ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News