ಕೋಚ್ ಶೋಧದಲ್ಲಿ ನೀರಜ್ ಚೋಪ್ರಾ

Update: 2017-07-11 18:44 GMT

ಭುವನೇಶ್ವರ, ಜು.11: ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 85.23 ಮೀ. ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದ 19ರ ಹರೆಯದ ನೀರಜ್ ಚೋಪ್ರಾ ಮುಂಬರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಗುರಿಹಾಕಿಕೊಂಡಿದ್ದು, ಇದಕ್ಕಾಗಿ ಕೋಚ್ ಹುಡುಕಾಟದಲ್ಲಿದ್ದಾರೆ.

ಜೂನಿಯರ್ ವಿಶ್ವ ಚಾಂಪಿಯನ್ ಚೋಪ್ರಾ ಕಳೆದ ವರ್ಷದ ಎಪ್ರಿಲ್‌ನಿಂದ ಕೋಚ್ ಇಲ್ಲದೆ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯದ ಜಾವೆಲಿನ್ ತಜ್ಞ ಗ್ಯಾರಿ ಕಾಲ್ವರ್ಟ್ 2016ರ ಎಪ್ರಿಲ್ ತನಕ ಚೋಪ್ರಾಗೆ ಕೋಚಿಂಗ್ ನೀಡುತ್ತಿದ್ದರು. ಚೋಪ್ರಾ ಓರ್ವ ಅಪರೂಪದ ಪ್ರತಿಭೆ ಎಂದು ಶ್ಲಾಘಿಸಿದ್ದರು.

ಲಂಡನ್‌ನಲ್ಲಿ ಆಗಸ್ಟ್ 4 ರಿಂದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಭಾರತದ ಅಥ್ಲೆಟಿಕ್ಸ್ ಫೆಡರೇಶನ್ ಚೋಪ್ರಾ ಎದುರಿಸುತ್ತಿರುವ ಕೋಚ್ ಸಮಸ್ಯೆಗೆ ಪರಿಹಾರ ಒದಗಿಸುವ ಕುರಿತು ಚಿಂತಿಸುತ್ತಿದೆ.

 ಒಂದೆರಡು ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೋಚ್‌ರೊಂದಿಗೆ ತರಬೇತಿ ನಡೆಸಲು ಚೋಪ್ರಾರನ್ನು ಯುರೋಪ್‌ಗೆ ಕಳುಹಿಸಿಕೊಡಲು ಚಿಂತಿಸಲಾಗುತ್ತಿದೆ ಎಂದು ಎಎಫ್‌ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News