ಹಕ್ಲಾಡಿ ಮಸೀದಿ ಅಧ್ಯಕ್ಷರಾಗಿ ಇಬ್ರಾಹಿಂ ನೇಮಕ
Update: 2017-07-12 18:03 IST
ಕುಂದಾಪುರ, ಜು.12: ಹಕ್ಲಾಡಿ ಮಾಣಿಕೊಳಲು ಬದ್ರಿಯಾ ಜುಮಾ ಮಸೀದಿಯ ಮಹಾಸಭೆಯು ಧರ್ಮಗುರು ಇಬ್ರಾಹಿಂ ಸಅದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಬದ್ರಿಯಾ ಮದರಸ ಹಾಲ್‌ನಲ್ಲಿ ಜರಗಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇಬ್ರಾಹಿಂ ಮಾಣಿಕೊಳಲು, ಉಪಾಧ್ಯಕ್ಷರಾಗಿ ಶರೀಫ್, ಕಾರ್ಯ ದರ್ಶಿಯಾಗಿ ಅಬ್ದುಲ್ ರಝಾಕ್, ಜೊತೆಕಾರ್ಯದರ್ಶಿಯಾಗಿ ಇಕ್ಬಾಲ್, ಕೋಶಾಧಿಕಾರಿಯಾಗಿ ಹಸೈನಾರ್ ಸಾಹೇಬ್, ಸಲಹೆಗಾರರಾಗಿ ಅಶ್ರಫ್, ಮುಹಮ್ಮದ್, ಅಯ್ಯುಬ್, ಖಾದರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಶೀದ್, ಅಬೂಬಕ್ಕರ್, ಮುನೀರ್, ನೂರುಲ್ಲಾ ಅವರನ್ನು ಆಯ್ಕೆ ಮಾಡ ಲಾಯಿತು.