ನಾಟಕ ರಚನಾ ಕಮ್ಮಟಕ್ಕೆ ಅರ್ಜಿ ಆಹ್ವಾನ
ಉಡುಪಿ, ಜು.12: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ 2017-18ನೇ ಸಾಲಿನಲ್ಲಿ ಸೃಜನಶೀಲ ಸಾಹಿತ್ಯ ಪ್ರಕಾರಗಳಲ್ಲಿ ಮಕ್ಕಳ ಪ್ರತಿಭೆ ಗಳನ್ನು ಪ್ರೋತ್ಸಾಹಿಸಲು, ಯುವ ಮತ್ತು ಉದಯೋನ್ಮುಖ ಬರಹಗಾರರಿಗೆ ನೆರವು ನೀಡುವ ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲು ಮತ್ತು ಸಮಸ್ಯೆಗಳ ಕುರಿತ ವಸ್ತು ವಿಷಯಗಳಿಗೆ ಸಂಬಂಧಪಟ್ಟಂತೆ ರಂಗ ನಾಟಕಗಳನ್ನು ರಚಿಸಲು ಆಸಕ್ತ ಮಕ್ಕಳು ಹಾಗೂ ಯುವ ಬರಹಗಾರರಿಗೆ ‘ನಾಟಕ ರಚನಾ ಕಮ್ಮಟ’ಕ್ಕೆ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಕ್ಕಳ ವಯೋಮಿತಿ 16 ವರ್ಷದೊಳಗೆ ಹಾಗೂ ಯುವ ಬರಹಗಾರರು 18 ವರ್ಷಕ್ಕೆ ಮೇಲ್ಪಟ್ಟು 40 ವರ್ಷ ವಯಸ್ಸಿನೊಳಗಿರಬೇಕು. ಅರ್ಜಿ ಸಲ್ಲಿಸಲು ಜು.22 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಬೆಂಗಳೂರು ವಲಯ ಸಂಚಾಲಕ ಸತೀಶ್ ಸಾಸ್ವೆಹಳ್ಳಿ (ದೂ.ಸಂ 9844367071), ಮೈಸೂರು ವಲಯ ಸಂಚಾಲಕ ಜನಾರ್ದನ್-ಜನ್ನಿ- (9945780989), ಬೆಳಗಾವಿ ವಲಯ ಸಂಚಾಲಕ ಶಂಕರ ಹಾಲಗತ್ತಿ (7019792585), ಕಲಬುರಗಿ ವಲಯ ಸಂಚಾಲಕ ಪ್ರಭಾಕರ್ ನಾತಖೇಡ್ (9448814099) ಹಾಗೂ ಅಶೋಕ್ ಎನ್ ಚಲವಾದಿ, ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು (080-22130912/22221241) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.