×
Ad

ಉದ್ಯಮಶೀಲತೆ ಯೋಜನೆಯಲ್ಲಿ 8 ವಾಹನಗಳ ವಿತರಣೆ

Update: 2017-07-12 20:15 IST

ಪುತ್ತೂರು, ಜು.12: ಉದ್ಯಮಶೀಲತಾ ಯೋಜನೆ(ಐಎಸ್‌ಬಿ) ಅಡಿಯಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ವಾಹನ ವಿತರಣಾ ಕಾರ್ಯಕ್ರಮ ಮಂಗಳವಾರ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರೂ. 36 ಲಕ್ಷ ವೆಚ್ಚದ 8 ವಾಹನಗಳನ್ನು ಶಾಸಕಿ ಶಕುಂತಳಾ ಶೆಟ್ಟಿ ಅವರು ವಿತರಿಸಿದರು. ಫಲಾನುಭವಿಗಳಾದ ಪೂವಪ್ಪ ನಾಯ್ಕ, ಸುರೇಶ್ ಮತ್ತು ದಿನೇಶ್ ಅವರಿಗೆ ಪಿಕಪ್, ಪದ್ಮಯ್ಯ ,ಪ್ರಶಾಂತ ಮತ್ತು ಸಂತೋಷ್ ಅವರಿಗೆ ಓಮ್ನಿ, ದೇವದಾಸ ಅವರಿಗೆ ಆಟೋ ರಿಕ್ಷಾ, ಶ್ರವಣ ಕುಮಾರ್ ಅವರಿಗೆ ಸ್ಪೀಟ್ ಡಿಸೈರ್ ಕಾರನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದ.ಕ. ಜಿ.ಪಂ. ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಕೆಡಿಪಿ ನಾಮ ನಿರ್ದೇಶನ ಸದಸ್ಯರುಗಳಾದ ಕೃಷಪ್ರಸಾದ್ ಆಳ್ವ,ಅಶೋಕ್ ಕುಮಾರ್ ಸಂಪ್ಯ,ವನಿತಾ ಆಚಾರ್ಯ,ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್,ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಎಸ್.ಆರ್. ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News