ಜಿಲ್ಲೆಯಲ್ಲಿ ಅಕ್ರಮ ವ್ಯವಹಾರ, ಮಾದಕ ದ್ರವ್ಯ ಸಾಗಾಟ ತಡೆಗೆ ಸೂಕ್ತ ಕ್ರಮ: ಅಲೋಕ್ ಮೋಹನ್‌

Update: 2017-07-12 15:10 GMT

ಮಂಗಳೂರು, ಜು.12: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಮತ್ತು ಮಾದಕ ದ್ರವ್ಯ ಸಾಗಾಟದ ತಡೆಗೆ ಸೂಕ್ತ ಕ್ರಮ ಕೈ ಗೊಳ್ಳಲು ಪೊಲೀಸರು ಮತುವರ್ಜಿವಹಿಸಲು ಸೂಚನೆ ನೀಡಿರುವುದಾಗಿ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿಯೂ ಮಾದಕ ದ್ರವ್ಯ ಸಾಗಾಟ ಜಾಲದ ತಡೆಗೆ ಪೊಲೀಸರು ವಿಶೇಷವಾಗಿ ಶ್ರಮಪಡುತ್ತಿದ್ದಾರೆ. ಈ ಕಾರ್ಯದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ ಇನ್ನಷ್ಟು ಸಹಕಾರಿಯಾಗುತ್ತದೆ ಎಂದು ಅಲೋಕ್ ಮೋಹನ್ ತಿಳಿಸಿದ್ದಾರೆ.

ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಪಾರ್ಲರ್ ಸೇರಿದಂತೆ ಅಕ್ರಮ ಚಟುವಟಿಯನ್ನು ತಡೆಗಟ್ಟಲು ನಡೆಸುವ ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯೂ ಸಹಕರಿಸುತ್ತಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News